ಸರಗೂರು: ತಾಲ್ಲೂಕಿನ ಪ. ಜಾತಿ ಮತ್ತು ಪ. ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾಗಿ ಕ್ಲಾರ್ಕ್ ಕಂ ಡಿಇಒರಾದ ಎಂ.ಬಿ.ಮಹದೇವ ಮತ್ತು ಬಿ ಮಟಕರೆ ಗ್ರಾಪಂ ಪಿಡಿಒ ಉಪಾಧ್ಯಕ್ಷೆಯಾಗಿ ಭಾಗ್ಯಮ್ಮ ಆಯ್ಕೆಯಾದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರದಂದು ಪ.ಜಾತಿ ಮತ್ತು ಪ.ಪಂಗಡ ಅಧಿಕಾರಿಗಳು ಹಾಗೂ ನೌಕರರ ಸಭೆ ನಡೆಸಿ ನಂತರ ಜಿಲ್ಲಾಧ್ಯಕ್ಷ ಪ್ರಕಾಶ್ ಹಾಗೂ ರಾಜ್ಯ ಹಾಗೂ ಜಿಲ್ಲಾ ಖಜಾಂಚಿ ಮಹದೇವ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಿಲ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಕಾಶ್, ನಮ್ಮ ಪ.ಜಾತಿ ಮತ್ತು ಪ.ಪಂಗಡ ಸರ್ಕಾರಿ ನೌಕರರು ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.
ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಸರ್ಕಾರಿ ನೌಕರರದ್ದು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಂ.ಬಿ.ಮಹದೇವ ರವರು ತಾಲ್ಲೂಕಿನಲ್ಲಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ನೌಕರರ ಸಮಸ್ಯೆ ಪರಿಹಾರಕ್ಕೆ ಅವರು ಮುಂದಾಗುತ್ತಾನೆ ಎಂದರು.
ನೌಕರರ ಮೇಲೆ ಹೆಚ್ಚಿನ ಒತ್ತಡವಿದೆ. ಮನೆ, ಕಚೇರಿ, ಸಾರ್ವಜನಿಕರು, ರಾಜಕೀಯ ವ್ಯಕ್ತಿಗಳಿಂದ ಒತ್ತಡ ಇರುತ್ತದೆ. ಒತ್ತಡಕ್ಕೆ ಭಯಭೀತರಾಗಿ ವ್ಯಸನಕ್ಕೆ ಒಳಗಾಗಬಾರದು. ಒತ್ತಡಗಳನ್ನು ಮೀರಿ ಬೆಳೆಯುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪಂ.ಜಾತಿ ಮತ್ತು ಪಂ.ಪಂಗಡ ಪದಾಧಿಕಾರಿಗಳು:
ಪ.ಜಾತಿ ಹಾಗೂ ಪ.ಪಂಗಡ ತಾಲ್ಲೂಕು ಗೌರವಧ್ಯಕ್ಷ ಕಾರ್ಯದರ್ಶಿ ಗ್ರೇಡ್ 1 ನರಸಿಂಹ ಮೂರ್ತಿ, ತಾಲ್ಲೂಕು ಅಧ್ಯಕ್ಷ ಮಹದೇವ ಎಂ.ಬಿ., ಉಪಾಧ್ಯಕ್ಷೆ ಭಾಗ್ಯ ಬಿ. (ಪಿ ಡಿ ಒ), ಉಪಾಧ್ಯಕ್ಷ ಮಹೇಶ್ (ಬಿಲ್ ಕಲೆಕ್ಟರ್), ಖಜಾಂಚಿ, ಚನ್ನನಾಯಕ (ಪಿ ಡಿ ಒ), ಕಾರ್ಯದರ್ಶಿ ಗ್ರೇಡ್ 1 ವರದರಾಜು, ಸಂಘಟನಾ ಕಾರ್ಯದರ್ಶಿ ಕ್ಲಾರ್ಕ್ ಕಂ ಡಿಇಒ ಅರುಣ್ ಕುಮಾರ್, ಕ್ಲಾರ್ಕ್ ಕಂ ಡಿ. ಇ.ಒ. ಚಂದ್ರು ಬಿ., ಕ್ರೀಡಾ ಕಾರ್ಯದರ್ಶಿ ಬಿಲ್ ಕಲೆಕ್ಟರ್ ವಿನೋದ್, ಸಾಂಸ್ಕೃತಿಕ ಕಾರ್ಯದರ್ಶಿ ಕ್ಲಾರ್ಕ್ ಕಂ ಡಿಇಒ ಸರಸ್ವತಿ ಬಾಯಿ, ಆಂತರಿಕ ಲೆಕ್ಕ ಪರಿಶೋಧಕರು ಎಸ್ ಡಿ ಎ ಸಂಜಯ್, ನರೇಗಾ ಯೋಜನೆ ಅಧಿಕಾರಿ ಮಹದೇವಸ್ವಾಮಿ, ಜಿಲ್ಲಾಧ್ಯಕ್ಷ ಪ್ರಕಾಶ್ ಹಾಗೂ ರಾಜ್ಯ ಹಾಗೂ ಜಿಲ್ಲಾ ಖಜಾಂಚಿ ಮಹದೇವ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಿಲ್ ಇನ್ನೂ ಸಿಬ್ಬಂದಿಗಳು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC