ನಟ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ʻದಿ ಡೆವಿಲ್ʼ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಥಾಯ್ಲೆಂಡ್ ನಲ್ಲಿ ಶೂಟಿಂಗ್ ನಲ್ಲಿ ಬಿಝಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.
ಇದರ ವಿಡಿಯೋ ತುಣುಕನ್ನು ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅತೀ ಶೀಘ್ರವೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಮೋಷನ್ ಪೋಸ್ಟರ್ ನ 1:05 ನಿಮಿಷದ ವಿಡಿಯೋ ಹಂಚಿಕೊಂಡಿರುವ ದರ್ಶನ್, ನಲ್ಮೆಯ ಸೆಲಬ್ರಿಟಿಗಳಿಗೆ… ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಮೋಷನ್ ಪೋಸ್ಟರ್‌ನಲ್ಲಿ ದರ್ಶನ್ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC