ಸರಗೂರು: ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಕಂದೇಗಾಲ ಶಿವರಾಜು ಹಾಗೂ ಪಕ್ಷದ ಜಾಲತಾಣ ಅಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ಯಶವಂತಪುರ ಶಿವಲಿಂಗಯ್ಯರವರ ಹುಟ್ಟು ಹಬ್ಬವನ್ನು ವಿವಿಧ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ವಿಶಿಷ್ಟವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು.
ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ ಬಳಿಕ ನಿರ್ಗತಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಂತರ ಸರಗೂರಿನ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರೊಂದಿಗೆ ಕೇಕ್ ಕತ್ತರಿಸಿ, ಗಿಡ ನೆಡುವುದರ ಮೂಲಕ ಜನ್ಮ ದಿನವನ್ನು ಆಚರಿಸಿಕೊಂಡರು.
ಬಳಿಕ ಮಾತನಾಡಿದ ಕಂದೇಗಾಲ ಶಿವರಾಜು ಅವರು, ಸರಗೂರು ತಾಲೂಕಿನ ಜನತೆಯು ಬಹಳ ವಿಶಿಷ್ಟ, ವಿಜೃಂಭಣೆಯಿಂದ ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿರುವುದು ಬಹಳ ಸಂತಸ ತಂದಿದೆ. ಜನತೆಯ ಅಭಿಮಾನಕ್ಕೆ ಸದಾ ಚಿರ ಋಣಿಯಾಗಿರುತ್ತೇನೆ. ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನ ಯುವಕರಿಗೆ ಹಾಗೂ ಯುವತಿಯರಿಗೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದಗಳು ತಿಳಿಸಿದರು.
ಎರಡು ತಾಲ್ಲೂಕುಗಳಲ್ಲಿ ನನ್ನ ಆಯ್ಕೆ ಮಾಡಿಕೊಂಡ ಆತ್ಮಿಯರಿಗೆ ಶಾಸಕರ ಜೊತೆ ಕೈಜೋಡಿಸಿಕೊಂಡು ಉತ್ತಮ ಕೆಲಸ ಮಾಡಲು ಮುಂದಾಗುತ್ತಾನೆ ಎಂದರು.
ಈ ಸಂದರ್ಭದಲ್ಲಿ , ಪಪಂ ಸದಸ್ಯ ಶ್ರೀನಿವಾಸ, ಸಿಂಡಿಕೇಟ್ ಬ್ಯಾಂಕ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಜಿಪಂ ಮಾಜಿ ಸದಸ್ಯರು ಪಿ.ರವಿ, ಭಾಗ್ಯಲಕ್ಷ್ಮಿ, ಮೈಮುಲ್ ನಿರ್ದೇಶಕ ಕೆ.ಈರೇಗೌಡ, ತಾಪಂ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಜಿಪಂ ಸದಸ್ಯ ಪುರದಕಟ್ಟೆ ಬಸವರಾಜು, ಟೌನ್ ಅಧ್ಯಕ್ಷ ಎಸ್.ಎನ್.ನಾಗರಾಜು,ಕಾಂಗ್ರೆಸ್ ಮುಖಂಡರಾದ ಶಿವಪ್ಪ ಕೋಟೆ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಚೆನ್ನಿಪುರ,ನಾಗರಾಜು ಉಯ್ಯಂಬಳ್ಳಿ, ಮುಳ್ಳೂರು ಲೋಕೇಶ್, ಮಸಹಳ್ಳಿ ಸೂರ್ಯಕುಮಾರ್,ಶಿವಲಿಂಗಯ್ಯ,ನಾಗೇಶ್, ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಕಳಸೂರು ಬಸವರಾಜು, ಲಂಕೆ ದೇವರಾಜು ,ದಯಾನಂದ,ಮಾದು, ವಿಜಯ್, ಗುಣ, ನಾರಾಯಣ್, ರಮೇಶ್, ಶೋಯಬ್, ಆರ್ಯ ಮಹೇಶ್, ಶೇಷ, ಮಹೇಶ್, ಮೊಳೆಯೂರು ಕಾವಲ್ ನಾಗೇಂದ್ರ, ನಾಗರಾಜರಾಮ್, ಚಿನ್ನಯ್ಯ, ಮಣಿಕಂಠ, ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


