ಸರಗೂರು: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ದೇವನಹಳ್ಳಿ ಚನ್ನರಾಯಪಟ್ಟಣ ಭೂ ಹೋರಾಟ ಸಮಿತಿಯಿಂದ ರೈತ ಹುತಾತ್ಮ ದಿನ ಆಚರಿಸಲಾಯಿತು. ಈ ವೇಳೆ ಸರಳವಾಗಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು .
ನಂತರ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನನಾಯಕ, ಶಿಕ್ಷಣ ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನವನ್ನು ಕೈಬಿಟ್ಟಿದ್ದು ಇದನ್ನು ಕೂಡಲೇ ಗೆಜೆಟ್ ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ಸು ಪಡೆಯಬೇಕು ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ರೈತ ಸಂಘದ ಯುವ ಘಟಕದ ಅಧ್ಯಕ್ಷ ನವೀನ್ ಹಳೆಹೆಗ್ಗುಡಿಲು ಮಾತನಾಡಿ, ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ, ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸ ಬೇಕು ಹಾಗೇನೆ ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕತಿದ್ದುಪಡಿ ಕೋಡ್ ಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ರಸ ಗೊಬ್ಬರದ ಕೊರತೆಯನ್ನು ಸರಿಪಡಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು. ಭೂ ಮಂಜೂರಾತಿ ಹಕ್ಕನ್ನು ನೀಡಿ 10 ವರ್ಷದಿಂದ ಸಾಗುವಳಿ ಮಂಜೂರಾತಿ ಸಿಗದ ರೈತರಿಗೆ ಭೂ ಮಂಜೂರಾತಿ ದೊರಕಬೇಕು. ಭೂ ವಿವಾದಗಳಿಂದಾಗುವ ಸಮಸ್ಯೆಗಳಿಗೆ ದುರಸ್ತಿ ಕಾರ್ಯ ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ದಸಂಸ (ಅಂಬೇಡ್ಕರ್ ವಾದ) ಸಂಘಟನೆ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿದರು.
ಕೆರೆಕಟ್ಟೆಗಳ ಒತ್ತೂರಿ ತೆರುಗುಳಿಸಬೇಕು ಹಾಗೂ ರೈತರ ಭೂಮಿಗೆ ಸಂಪರ್ಕ ರಸ್ತೆಯನ್ನು ಕಲ್ಪಿಸಿ ಕೊಡುವ ಕಾಯಿದೆಯನ್ನು ಜಾರಿಗೆ ತರಬೇಕು. ಸರಗೂರು ತಾಲೂಕು ಕಚೇರಿಯಲ್ಲಿ ಕೇವಲ 4 ಅಧಿಕಾರಿಗಳು ಕಾರ್ಯನಿರ್ವಾಹಿಸುತ್ತಿದ್ದು, ಪೂರ್ಣ ಅಧಿಕಾರಿಗಳ ಹಾಕಿಕೊಡಬೇಕು. ಸರಗೂರು ತಾಲ್ಲೂಕಿನ ಹಾಡಿಗಳ ಜನರಿಗೆ ರೇಷನ್ ಕಾರ್ಡ್. ಇಲ್ಲದೆ. ಟ್ರೈಬಲ್ ಆಹಾರ ಪದಾರ್ಥ ಪಡೆಯ ಅನರ್ಹರಾಗಿದ್ದಾರೆ ಆದ್ದರಿಂದ ಸೀಘ್ರುದಲ್ಲಿ ರೇಷನ್ ಕಾರ್ಡ್ ನೋಂದಣಿ ಮಾಡಲು ಅವಕಾಶ ಮಾಡಿಕೊಡಬೇಕು ಬಿ. ಮಟಕರೆ ನಾಡಕಛೇರಿ ಯಲ್ಲಿ ಆಧಾರ್ ನೋಂದಣಿ. ಇಲ್ಲದೆ ವಿದ್ಯಾರ್ಥಿಗಳು, ಹಾಡಿಯ ಜನಗಳು ಸಾರ್ವಜನಿಕರು. ಬಿ. ಮಟಕೆರೆ ಯಿಂದ 20 ಕಿಲೋಮೀಟರ್ ದೂರ ಅಲೆಯಲ್ಲಿ ಬೇಕಾಗಿದೆ ಆದ್ದರಿಂದ ಆಧಾರ್ ನೋಂದಣಿ ಕೇಂದ್ರ ತಗೆಯಬೇಕು.
ಸಾಗರೆ ಸರ್ವೆ ನಂಬರ್ 388, 389 ರಲ್ಲಿ ಕಬಿನಿ ಜಲಾಶಯಕ್ಕೆ ಮುಳುಗಡೆಯಾದ ರೈತರಿಗೆ ಜಮೀನು ನೀಡಿದ್ದು, ಇದರಲ್ಲಿ ಬೇರೆ ರೈತರು ಬಂದು ದುರುಪಯೋಗ ಮಾಡಿ 50, 51 ಮತ್ತು 53 ಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಈ ಮೇಲ್ಕಂಡ ಸರ್ವೆ ನಂಬರುಗಳಿಗೆ ಹೊಸದಾಗಿ ಸಾಗುವಳಿ ನೀಡಬಾರದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಶಿವಕುಮಾರಸ್ವಾಮಿ, ಉಪಾಧ್ಯಕ್ಷ ಗಣೇಶ್ ಹಳಿಯೂರು, ಪ್ರಧಾನ ಕಾರ್ಯದರ್ಶಿ ನಂದೀಶ್ವರಸ್ವಾಮಿ, ಯುವ ಘಟಕದ ಅಧ್ಯಕ್ಷ ಶಿವಪ್ಪ, ಕಾರಯ್ಯ, ಕಾರ್ಯಾಧ್ಯಕ್ಷ ಕುಮಾರಗೌಡ, ಗೋವಿಂದ ನಾಯಕ, ರತ್ನಮ್ಮ, ಸಿದ್ದರಾಜು ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC