ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಇದೇ ಆಗಸ್ಟ್1ಕ್ಕೆ ತೆರೆಗೆ ಬರುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ.
ಇನ್ನೂ ಚಿತ್ರ ನೋಡಲು ಯಶ್ ಬರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪುಷ್ಪಾ ಉತ್ತರಿಸಿದ್ದಾರೆ. ಯಶ್‌ಗೆ ಹೇಳದೇ ಏನು ಮಾಡಿಲ್ಲ ಅವನಿಗೂ ಗೊತ್ತು. ಯಶ್ 25ವರ್ಷ ಆದ್ಮೇಲೆ ರಾಕಿಂಗ್ ಸ್ಟಾರ್ ಅಂತಾ ಗೊತ್ತಾಗಿದ್ದು ನಿಮಗೆ. ಅದರ ಹಿಂದೆ ಅವನು ಪಟ್ಟ ಶ್ರಮ ಎಷ್ಟಿದೆ ಅಂತಾ ನಮಗೆ ಗೊತ್ತು ಎಂದು ಅವರು ಹೇಳಿದರು.
ಅವನೇ ಸಿನಿಮಾ ಪ್ರೊಡಕ್ಷನ್ ಮಾಡಲು ನಮಗೆ ಸ್ಫೂರ್ತಿ. ಮನೇಲಿರೋ ಬಾಸ್ (ಯಶ್) ಸಿನಿಮಾ ಮಾಡೋಕೆ ಸ್ಪೂರ್ತಿ ಎಂದಿದ್ದಾರೆ. ಸಿನಿಮಾ ಜನಕ್ಕೆ ಇಷ್ಟ ಆಗಲಿ ಗೆಲ್ಲಲಿ ಆಗ ಅವನು ಖುಷಿ ಪಡ್ತಾನೆ ಎಂದಿದ್ದಾರೆ.
ಕೊತ್ತಲವಾಡಿ ಒಂದು ಹಳ್ಳಿಯಲ್ಲಿ ನಡೆಯುವ ಸಿನಿಮಾ. ಹಿಂದೆ ನನ್ನ ಮಗ ಯಶ್ ಕಿರಾತಕ ಸಿನಿಮಾ ಮಾಡಿದ್ದನ್ನ ಈಗಲೂ ನಮ್ಮೂರಿನ ಜನ ನೆನೆದುಕೊಳ್ತಾರೆ. ಆ ಬಗ್ಗೆ ಈಗಲೂ ಮಾತಾಡಿಕೊಳ್ತಾರೆ. ಹಾಗೆ ಈ ಕೊತ್ತಲವಾಡಿ ಸಿನಿಮಾ ಕೂಡಾ ಇಷ್ಟವಾಗಲಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC