ಬೀದರ್ : ಕಲಬುರಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ಪ್ರಭಾ, ಚಂದ್ರಪ್ರಕಾಶ್ ಪ್ರಭಾ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿತ್ತು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
2 ಕೋಟಿ 24 ಲಕ್ಷ 57 ಸಾವಿರ ರೂ. ಮೌಲ್ಯದ ಒಟ್ಟು ಸ್ಥಿರ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ 3 ಸೈಟ್, ಒಂದು ಮನೆ ಮತ್ತು ಕೃಷಿ ಭೂಮಿ ಸೇರಿದೆ. ಅದೇ ರೀತಿ ಒಟ್ಟು 2 ಕೋಟಿ 35 ಲಕ್ಷ 23 ಸಾವಿರ 897 ರೂ. ಯ ಚರ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 15 ಲಕ್ಷ 75 ಸಾವಿರ 660 ರೂ. ನಗದು, 1 ಕೋಟಿ 26 ಲಕ್ಷ 60 ಸಾವಿರ ರೂ. ಮೌಲ್ಯದ ಆಭರಣ ವಸ್ತು, 12 ಲಕ್ಷ 50 ಸಾವಿರ ರೂ. ಮೌಲ್ಯದ ಆಭರಣ ವಸ್ತು, 12 ಲಕ್ಷ 50 ಸಾವಿರ ರೂ. ಮೌಲ್ಯದ ವಾಹನಗಳು ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


