ಕೊರಟಗೆರೆ: ಮಗಳನ್ನು ಚುಡಾಯಿಸಿದ್ದನ್ನ ಪ್ರಶ್ನಿಸಿದ ತಂದೆಗೆ ಆರೋಪಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಚಾಕು ಹಾಕಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕ್ ಸಿಎನ್ ದುರ್ಗಾ ಹೋಬಳಿ ಬೋರಪ್ಪನಹಳ್ಳಿ ಗ್ರಾಮದಲ್ಲಿ ದುರ್ಘಟನೆ ಜರುಗಿದ್ದು, ಶಾಲಾ ವಿದ್ಯಾರ್ಥಿನಿಯನ್ನ ಅನಾವಶ್ಯಕವಾಗಿ ರೇಗಿಸುತ್ತಿದ್ದ ಯುವಕನನ್ನ ಪ್ರಶ್ನಿಸಿದ ತಂದೆ ಗಿರೀಶ್ ಎಂಬುವರ ಮೇಲೆ ಮೂರು ಜನ ದಾಳಿ ನಡೆಸಿ, ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಯನ್ನ ಇದೇ ಗ್ರಾಮದ ಪೃಥ್ವಿರಾಜ್ ಎಂಬ ಯುವಕ ಪದೇ ಪದೇ ಚುಡಾಯಿಸುವುದನ್ನು ಪ್ರಶ್ನಿಸಿದ ತಂದೆ ಗಿರೀಶ್ ನನ್ನ ಆರೋಪಿ ಪೃಥ್ವಿರಾಜ್, ಅಣ್ಣ ತಿಮ್ಮೇಗೌಡ ಹಾಗೂ ತಂದೆ ಹನುಮಂತರಾಯ ಎಂಬುವರು ಏಕಾಏಕಿ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದು ನಂತರ ಚಾಕುವಿನಿಂದ ಭುಜ ಭಾಗ ಹಾಗೂ ತೊಡೆ ಸೇರಿದಂತೆ ಹಲವು ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಪಟ್ಟರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ಕಿರುಚಾಟದಿಂದ ಸಾರ್ವಜನಿಕರು ಸೇರಿ ನನ್ನನ್ನು ಬಚಾವ್ ಮಾಡಿದ್ದಾರೆ. ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವರದಿ : ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


