ಸರಗೂರು: ಶಿವಮೊಗ್ಗ ಪತ್ರಿಕಾ ಭವನದಲ್ಲಿ ಇತ್ತೀಚೆಗೆ ನಡೆದ ಧೀವರು ಮತ್ತು ಜಾತಿ ಗಣತಿ ಕುರಿತು ಒಂದು ಸಮಾಲೋಚನೆ ನಡೆಯಿತು. ಆ ಸಭೆಯಲ್ಲಿ ಹಿರಿಯರಾದ ಮಧು ಗಣಪತಿ ರಾವ್ ಡಾ.ಜಿ.ಡಿ.ನಾರಾಯಣಪ್ಪ ಶಿವಾನಂದ ಕುಗ್ವೆ ಧರ್ಮರಾಜು ಮಂಜಪ್ಪ ಡಿ.ಆರ್.ಮೋಹನ್ ಚಂದ್ರಗುತ್ತಿ ಇನ್ನೂ ಹಲವಾರು ಮುಖಂಡರು ಭಾಗವಹಿಸಿ ಆ ಸಭೆಯಲ್ಲಿ ಜಾತಿ ಗಣತಿಯನ್ನು ಧೀವರು ಎಂದು ನಮೂದಿಸಬೇಕು ಎಂದು ನಿರ್ಣಯ ಮಾಡಿದ್ದಾರೆ ಅದು ಸರಿಯಲ್ಲ. ಸರ್ಕಾರ ಸೌಲಭ್ಯಗಳನ್ನು ಪಡೆಯಲು ಅನುಕೂಲವ ನಿಟ್ಟಿನಲ್ಲಿ ನಾವುಗಳು ಧೀವರು ಅನ್ನೋ ಬದಲು ಈಡಿಗ ಎಂದು ಜಾತಿ ಆದಾಯ ಪತ್ರ ನಮೂದಿಸಿ. ಆದ್ದರಿಂದ ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಸಮಾಜದವರು ಇರುವುದರಿಂದ ಈಡಿಗ ಎಂದು ನಮೂದಿಸಬೇಕು ಎಂದು ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ ಆರ್ಯ ಈಡಿಗ ಸಮಾಜದ ಸಂಘಟನಾ ಕಾರ್ಯದರ್ಶಿ ಹಾಗೂ ಸರಗೂರು ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದರು.
12ನೆ ಶತಮಾನದಲ್ಲಿ ಹೆಂಡದ ಮಾರಾಯ ಸೇಂದಿಯನ್ನು ಇಳಿಸಿ ವ್ಯಾಪಾರ ಮಾಡುತ್ತ ಬಂದಿದ್ದರು ಅದಾದ ನಂತರ 18.19 ಶತಮಾನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಈಳವರ ಜನಾಂಗಕ್ಕೆ ಸೇರಿದ್ದು ಆವಾಗಲು ಕೂಡ ಸೇಂದಿ ಮಾರುತ್ತಿದರು. ಅವಾಗ ನಾರಾಯಣ ಗುರುಗಳು ಒಂದು ಸಂದೇಶ ಸಾರಿ ಸೇಂದಿ aಗಡಿಯಲ್ಲಿ ಮಾರುವುದು ಮಹಾ ಪಾಪ ಎಂದು ಸಂದೇಶ ಕೊಟ್ಟಿರುತ್ತಾರೆ .
ಸಂದೇಶ ಕೊಟ್ಟ ನಂತರ ಗುತ್ತಿಗೆದಾರರಿಗೆ ಮಾರಾಟಗಾರರಿಗೆ ಬಡವರಿಗೆ ವಸತಿಗಳನ್ನು ಮತ್ತು ಮೂರ್ತೇದಾರರಿಗೆ ವ್ಯವಸಾಯ ಮತ್ತು ನಾರಿನ ಫ್ಯಾಕ್ಟರಿಗಳನ್ನು ಕಟ್ಟಿಸಿ ಜೀವನಕ್ಕಾಗಿ ಮಾಡಿಕೊಟ್ಟಿದ್ದರು.
ಆದ್ದರಿಂದ 12 ಮತ್ತು 18 ಮತ್ತು 19 ಶತಮಾನದಲ್ಲಿಯೂ ಸೇಂದಿ ಬಾಬು ನಡೆಸಿಕೊಂಡು ಬರುತ್ತಿದ್ದು. ನಾರಾಯಣ ಗುರುಗಳ ಸಂದೇಶದ ಆಧಾರದ ಮೇಲೆ ಕುಲಕಸುಬನ್ನು ಬಿಟ್ಟು ವ್ಯವಸಾಯ ಗುಡಿ ಕೈಗಾರಿಕೆಗಳಲ್ಲಿ ಜೀವನ ಕಂಡುಕೊಂಡರು ಅದಾದ ನಂತರ ನಮ್ಮ ಸಮಾಜವು ಈ ಸೇಂದಿ ಬಾಬು ಬಿಟ್ಟು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ನಮ್ಮ ಸಮಾಜದ ಸ್ವಾಮೀಜಿಗಳು ಒಳಗೊಂಡು ಕೇಂದ್ರ ಸಂಘದ ಅಧ್ಯಕ್ಷರು ನಮ್ಮ ಸಮಾಜದ ಎಲ್ಲಾ ಪಕ್ಷದ ನಾಯಕರನ್ನು ಕೇಂದ್ರ ಸಂಘಕ್ಕೆ ಕರೆದು ಸಭೆ ನಡೆಸಿ ಸ್ವಾಮಿಗಳ ಸಾನಿಧ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಈಡಿಗ ಸಮಾಜ ಎಂದು ನಮೂದಿಸ ಬೇಕೆಂದು ಸಭೆಯಲ್ಲಿ ಪತ್ರಿಕೆ ಹೇಳಿಕೆಯಲ್ಲಿ ಒತ್ತಾಯಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC