ಔರಾದ: ಪಾಲನೆ ಪೋಷಣೆಯಿಂದ ವಂಚಿತರಾದ ಮಕ್ಕಳಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಇದರಿಂದ ಮಕ್ಕಳು ಮಾನಸಿಕ ದೈಹಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಂಯೋಜಕ ರಮೇಶ್ ಸೂರ್ಯವಂಶಿ ಹೇಳಿದರು.
ತಾಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಷಕತ್ವ ಸಂಸ್ಥೆಗಳಪಾಲುದಾರರಿಗೆ ನಡೆದ ಜಿಲ್ಲಾಮಟ್ಟದ ಸಮಾಲೋಚನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪೋಷಕತ್ವ ಎಂದರೆ ಕಾನೂನಿನ ಪ್ರಕಾರ ಅನಾಥರು ಎಂದು ಪರಿಗಣಿಸಿದ ಮಕ್ಕಳು ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿವಾರದ ಮೂಲಕ ಸಿಗುವ ಕಾಳಜಿಯಾಗಿದೆ.
ಬಾಲನ್ಯಾಯಕಾಯ್ದೆ– 2015 ತಿದ್ದುಪಡಿ 21ರ ಅನ್ವಯ ಪೋಷಕತ್ವ ಯೋಜನೆ 2022 ಅನುಷ್ಠಾನಗೊಳ್ಳಲು ಸರ್ಕಾರ ಜನರ ಮಧ್ಯೆ ಸ್ವಯಂ ಸೇವಾ ಸಂಸ್ಥೆಗಳು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಡಾನ್ ಬೋಸ್ಕೊ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿಮಪ್ಪ ಆರೋಗ್ಯ ಸಿಬ್ಬಂದಿ, ವಲಯ ಮಟ್ಟದ ಆಶಾ ಕಾರ್ಯಕರ್ತರು ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC