ತಿರುಪತಿ: ತಿರುಪತಿ ತಿರುಮಲ ಬೆಟ್ಟದಲ್ಲಿ ಬೈಕ್ ಸವಾರನ ಮೇಲೆ ಚಿರತೆಯೊಂದು ದಾಳಿ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಬೈಕ್ ವೊಂದು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ಹೊಂಚುಹಾಕಿ ಬೇಟೆಗಾಗಿ ಕಾಯುತ್ತಿದ್ದ ಚಿರತೆ ಏಕಾಏಕಿ ರಸ್ತೆಗೆ ಹಾರಿ ಬೈಕ್ ನನ್ನು ಹಿಡಿಯಲು ಮುಂದಾಗಿದೆ. ಆದರೆ ಬೈಕ್ ವೇಗವಾಗಿ ಇದ್ದುದರಿಂದಾಗಿ ಚಿರತೆಗೆ ಬೈಕ್ ಸಿಕ್ಕಿಲ್ಲ. ಹೀಗಾಗಿ ಬೈಕ್ ಸವಾರ ಸ್ವಲ್ಪದರಲ್ಲಿ ಪಾರಾಗಿದ್ದಾನೆ.
ಚಿರತೆ ಬೈಕ್ ನ ಮೇಲೆ ಹಾರುತ್ತಿರುವ ದೃಶ್ಯವನ್ನು ಇತರ ವಾಹನದಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ. ಅಂದ ಹಾಗೆ ತಿರುಮಲದಲ್ಲಿ ಚಿರತೆ ದಾಳಿ ಇದೇ ಮೊದಲೇನಲ್ಲ.. ಈ ಹಿಂದೆ ಅಲಿಪಿರಿಯಲ್ಲಿ 350ನೇ ಮೆಟ್ಟಿಲು ಬಳಿ ಚಿರತೆ ಕಾಣಿಸಿಕೊಂಡಿತ್ತು. ತಿರುಪತಿ-ತಿರುಮಲ ಮೆಟ್ಟಿಲುಗಳ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಈ ಸುದ್ದಿ ಕೇಳಿ ಜನರು ಭಯಭೀತರಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC