ಬೆಂಗಳೂರು: ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟ ಪ್ರಥಮ್ ಗೆ ಡಿ ಬಾಸ್ ಅಭಿಮಾನಿಗಳು ಜೀವಬೆದರಿಕೆ ಹಾಕಿದ್ದರು ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಡಿ ಕಂಪೆನಿ ಹಾಗೂ ನಟ ಪ್ರಥಮ್ ನಡುವೆ ವಾರ್ ಮುಂದುವರಿದಿದೆ.
ಪ್ರಥಮ್ ಆರೋಪಕ್ಕೆ ಡಿ ಕಂಪೆನಿ ಉತ್ತರ:
ಪ್ರಥಮ್ ಮೇಲೆ ಹಲ್ಲೆ ಪ್ರಕರಣ ಸತ್ಯ ಹೊರ ಬಂದಿದೆ , ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು, ನಮ್ಮ ಪ್ರಶ್ನೆ ದರ್ಶನ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ ? ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಕಾರಣ ಇಷ್ಟೇ ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ. ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ ಹೇಗಿದ್ರು ನೀವು ನಿರ್ದೇಶಕರು ಅಲ್ಲವೇ ಸ್ವಾಮಿ ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ ಎಂದು ಪ್ರಥಮ್ ಗೆ ಡಿ ಕಂಪೆನಿ ತಿರುಗೇಟು ನೀಡಿದೆ.
ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ ? ನೀವು ಸಭ್ಯರು ತಾನೆ ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡ್ಡವಟಿಗೆ ಬಾಸ್ ಹೆಸರು ತಳುಕು ಯಾಕೆ ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ ? ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ ನಮ್ಮ ಸಂಘದ ಸದಸ್ಯರು ? ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ ಪ್ರೈವೇಟ್ ತೋಟದಲ್ಲಿ ಅಮಲಿನ ನಡೆದ ಜಗಳಕ್ಕೆ ನಮ್ಮ ನಟ ಆಗಲಿ ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಅಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡಿಲ್ಲ ಅಂದರೆ ಹೇಳಿ ದರ್ಶನ್ ಅಣ್ಣ ಪೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ ಎಂದು ಪ್ರಥಮ್ ಗೆ ತಿರುಗೇಟು ನೀಡಲಾಗಿದೆ.
ಪ್ರಥಮ್ ಪ್ರತಿಕ್ರಿಯೆ:
ಡಿ ಕಂಪನಿ ಅದೊಂದು ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಅಂತಾ ಹೆಸರಿಟ್ಕೊಳ್ಳಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಇಂಟರ್‌ಪೋಲ್, ಸೈಬರ್ ಕ್ರೈಮ್, ಇಂಟಲಿಜೆನ್ಸ್ ಇವೆಲ್ಲಾ ದೇಶದ ಬಹಳ ದೊಡ್ಡ ಬೇಹುಗಾರಿಗೆ ಕಂಪನಿಗಳು. ಇವನ್ನೆಲ್ಲಾ ಮುಚ್ಚಿ ಎಲ್ಲಾ ಕೇಸ್ ಗಳನ್ನು ಆ ಡಿ–ಕಂಪನಿ, ಡುಬಾಕ್ ಕಂಪನಿಗೆ ಕೊಡಿ. ಪರಿಹರಿಸ್ತಾರೆ. ಅವತ್ತು ದೊಡ್ಡಬಳ್ಳಾಪುರದಲ್ಲಿ ನಾನು ರೌಡಿಗಳ ಬಳಿ ಚಿಪ್ಸು–ಪಪ್ಸ್ ತಿನ್ನೋಕೆ ಹೋಗಿದ್ನಂತೆ. ಸುಮ್ನೆ ತಪ್ಪು ಮಾಹಿತಿ ಹಬ್ಬಿಸಬೇಡಿ. ಮೊದಲು ಶಿಕ್ಷಣ ಮುಖ್ಯ. ಸುಮ್ನಿದ್ದು ನಿಮ್ಮ ಅಮ್ಮ–ಅಪ್ಪನಿಗೆ ದುಡಿದು ತಂದು ಸಾಕಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಡುಬಾಕ್ ಕಂಪನಿಯ ಇಂಟಲಿಜೆನ್ಸ್ ಪ್ರಕಾರ ಇನ್ವೇಸ್ಟಿಕೇಷನ್ ಮಾಡಿ ಹೇಳಿದ್ರಂತೆ ಅವತ್ತು ಹಲ್ಲೆ ಮಾಡೋಕೆ ಚಿಪ್ಸು–ಪಪ್ಸು ಮ್ಯಾಟರಂತೆ. ಜೊತೆಗೆ ಅಲ್ಲಿರುವವರು ದರ್ಶನ್ ಫ್ಯಾನ್ಸ್ ಅಲ್ವಂತೆ ಅಂತ ಹೇಳ್ತಿದ್ದಾರೆ. ಸುಮ್ಮನೇ ಡಿ-ಕಂಪನಿ ಅಂತ ಹೆಸರಿಟ್ಕೊಂಡು ಪುಂಡಾಟ ಮಾಡ್ತಾರೆ. ಅಲ್ಲಿ ಏನಾಯ್ತು ಅಂತ ಎಸ್ ಪಿಯವರು ಹೇಳ್ತಾರೆ. ನಿಮಗೆ ಒಂದು ಚೂರಾದರೂ ಬುದ್ಧಿ ಇದ್ರೆ, ತಪ್ಪು ಮ್ಯಾಟರ್ ಹಬ್ಬಿಸೋದು ಬಿಡಿ. ನಾನು ಅಲ್ಲೇನೂ ಚಿಪ್ಸು ತಿನ್ನಕ್ಕೆ ಹೋಗಿರಲಿಲ್ಲ ಎಂದು ಸೆಲ್ಫಿ ವಿಡಿಯೋ ಮಾಡಿ ಟಾಂಗ್ ಕೊಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


