ಬೆಳ್ತಂಗಡಿ: ಅನಾಮಧೇಯ ವ್ಯಕ್ತಿಯೋರ್ವ ತಾನು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರವೂ ಆತ ಗುರುತಿಸಿದ ಸ್ಥಳದಲ್ಲಿ ಅಗೆಯುವ ಕಾರ್ಯ ಮುಂದುವರಿದಿದೆ.
ಸೋಮವಾರ ವಿಶೇಷ ತನಿಖಾ ತಂಡ ಎಸ್ ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಅನಾಮಧೇಯ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಕ್ಕೆ ಮಾರ್ಕಿಂಗ್ ಮಾಡಲಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.
ನೇತ್ರಾವತಿ ದಡದಲ್ಲಿ ಸಾಕ್ಷಿದಾರ ಗುರುತಿಸಿದ 2 ಪಾಯಿಂಟ್ ಗಳಲ್ಲಿ ಮೃತದೇಹ ಸಿಕ್ಕಿಲ್ಲ, ಹಲವು ವರ್ಷಗಳ ಹಿಂದೆ ಈ ಪ್ರದೇಶಗಳಲ್ಲಿ ತಾನು ಹೂತಿರುವುದಾಗಿ ದೂರುದಾರ ಹೇಳಿದ್ದಾನೆ. ಮಳೆಗಾಲದಲ್ಲಿ ಪ್ರವಾಹದ ಸಂದರ್ಭದಲ್ಲಿ ಈ ಪ್ರದೇಶಗಳಿಂದ ಮೃತದೇಹ ಕೊಚ್ಚಕೊಂಡು ಹೋಗುವ ಸಾಧ್ಯತೆ ಅಥವಾ ಮೃತದೇಹದ ಮೇಲೆ ಮತ್ತಷ್ಟು ಮಣ್ಣು ಬಿದ್ದು ಮುಚ್ಚಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇನ್ನುಳಿದ ಪಾಯಿಂಟ್ ಗಳಲ್ಲಿಯೂ ಮೃತದೇಹಕ್ಕಾಗಿ ತೀವ್ರ ಹುಡುಕಾಟ ಮುಂದುವರಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC