ಬೆಂಗಳೂರು: ಪಿಸ್ತೂಲ್ ನಿಂದ ಮಿಸ್ ಫೈರ್ ಆದ ಗುಂಡು ತಗುಲಿ ಯುವತಿಯ ಒಂದು ಕಿಡ್ನಿಗೆ ತೀವ್ರ ಹಾನಿಯಾದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೇಚಲ್ (32) ಎಂಬವರು ಕಿಡ್ನಿ ಕಳೆದುಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಈಕೆಯ ಸ್ನೇಹಿತನಾದ ನಿಖಿಲ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಕ್ಸ್ ಟೌನ್‌ನ ನಿವಾಸಿಯಾಗಿದ್ದ ರೇಚಲ್ ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿರುವ ನಿಖಿಲ್ ನಾಯಕ್ ನ ಮನೆಗೆ ತೆರಳಿದ್ದರು. ನಿಖಿಲ್ ನಾಯಕ್ ಶೌಚಾಲಯಕ್ಕೆ ಹೋಗಿದ್ದಾಗ ರೇಚಲ್ ಆತನ ಪಿಸ್ತೂಲ್ ಹಿಡಿದು ನೋಡುತ್ತಿದ್ದಾಗ ಮಿಸ್ ಫೈರ್ ಆಗಿದೆ. ಗುಂಡು ರೇಚಲ್ ಅವರ ಹೊಟ್ಟೆಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ನಿಖಿಲ್ ನಾಯಕ್ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೇಚಲ್ ಅವರ ಒಂದು ಕಿಡ್ನಿ ಹಾನಿಗೊಳಗಾಗಿದ್ದು, ವೈದ್ಯರು ತೆಗೆದು ಹಾಕಿದ್ದಾರೆ. ಇದೀಗ ರೇಚಲ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC