ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಹಾಗೂ ನಟ ಪ್ರಥಮ್ ಸಮರ ಸಾರಿದ್ದಾರೆ. ಈ ವಿಚಾರವಾಗಿ ಪ್ರಥಮ್, ನಟಿ ರಮ್ಯಾ ಹಲವಾರು ಹೇಳಿಕೆ ನೀಡಿದ್ದಾರೆ. ದರ್ಶನ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ನಟ ದರ್ಶನ್ ಶಕ್ತಿಪೀಠ ಕಾಮಾಕ್ಯ ದೇಗುಲಕ್ಕೆ ವಿಜಯಲಕ್ಷ್ಮೀ ಜೊತೆಗೆ ಭೇಟಿ ನೀಡಿದ್ದಾರೆ.
ನಟ ದರ್ಶನ್ ವಿರುದ್ಧದ ಆರೋಪಗಳಿಗೆ ಪತ್ನಿ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದಾರೆ. ಕಾಮಾಕ್ಯ ದೇಗುಲದಲ್ಲಿ ಪತಿ ದರ್ಶನ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಜಯಲಕ್ಷ್ಮೀ, ‘’ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂಬ ನಟಿ ರಮ್ಯಾ ಅವರ ಪೋಸ್ಟ್ ಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್, ಮೆಸೇಜ್ ಮಾಡಿದ್ದಾರೆ ಎಂದು ರಮ್ಯಾ ಆರೋಪಿಸಿದ್ದರು. ಅತ್ತ ನಟ ಪ್ರಥಮ್ ತನ್ನ ಮೇಲೆ ದರ್ಶನ್ ಫ್ಯಾನ್ಸ್ ಜೀವ ಬೆದರಿಕೆಯೊಡ್ಡಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC