ಸರಗೂರು: ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಗುರುವಾರದಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಆರ್.ಧ್ರುವನಾರಾಯಣ್ ರವರ 64ನೇ ಹುಟ್ಟುಹಬ್ಬವನ್ನು ಸರಳವಾಗಿ ಕೆಕ್ ಕಟ್ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಣೆ ಮಾಡಲಾಯಿತು.
ನಂತರ ಮಾತನಾಡಿದ ಪಪಂ ಸದಸ್ಯ ಶ್ರೀನಿವಾಸರವರು ಸರಗೂರು ತಾಲೂಕನ್ನು ಧ್ರುವನಾರಾಯಣ್ ರವರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಘೋಷಣೆ ಮಾಡಿಸಿದರು. ದಿ ಮಾಜಿ ಶಾಸಕ ಚಿಕ್ಕಮಾದುರವರು ಜೊತೆಗೂಡಿ ಸಾಕಷ್ಟು ಎರಡು ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದರು. ನಂತರ ಶಾಸಕ ಅನಿಲ್ ಕುಮಾರ್ ರವರ ಶಾಸಕರಾಗಲು ಶ್ರಮ ಪಟ್ಟಿದರು. ಅವರು ಅಧಿಕಾರಿ ಇಲ್ಲದ ಸಮಯದಲ್ಲಿ ತಾಲೂಕಿನ ಜನತೆಗೆ ಕೆಲಸ ಕಾರ್ಯಗಳು ಮಾಡಿಕೊಂಡು ಬರುತ್ತಿದರು. ಕಾಯಕಯೋಗಿ ಎಂದು ಹೆಸರು ಪಡದುಕೊಂಡಿದ್ದರು. ಅವರು ಇವಾಗ ಕೂಡ ನಮ್ಮ ಜೊತೆಯಲ್ಲಿ ಇದ್ದರೆ ಎಂದು ಭಾವನೆ ಇದೆ ಎಂದರು.
ತಾಲೂಕಿನ ಜನರ ಮನೆ ಮಾತಾಗಿದೆ ಧ್ರುವನಾರಾಯಣ್ ಹೆಸರು. ಏಕೆಂದರೆ ವಯಸ್ಸಾದರಿಂದ ಸಣ್ಣ ಪುಟ್ಟ ಮಕ್ಕಳವರೆಗೆ ಗೊತ್ತು. ಅವರು ಧ್ರುವತಾರೆ ಕಣ್ಮರೆಯಾಗಿ ಇಂದಿಗೆ ಮೂರು ವರ್ಷಗಳ ಅಂತ್ಯಕ್ಕೆ ಬಂದಿದೆ. ಅವರು ಇಲ್ಲದೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅನಾಥವಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಟೌನ್ ಮಾಜಿ ಅಧ್ಯಕ್ಷ ಮಂಜುನಾಥ, ಪಪಂ ಮಾಜಿ ಅಧ್ಯಕ್ಷ ಜ್ಯೋತಿ ಯೋಗೇಶ್, ಮಾಜಿ ಸದಸ್ಯರು ರಂಗನಾಥ್, ಬಿಲ್ಲಯ್ಯ, ಗುತ್ತಿಗೆದಾರ ಎಸ್.ಎಸ್.ಬಸವರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ, ಅಭಾವೀಲಿಂ ಯುವ ಘಟಕದ ಅಧ್ಯಕ್ಷ ಪಿ ನಂದೀಶ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷ ಅಮೀರ್ ಸುಹೇಲ್,ಮುಖಂಡರು ಮಹದೇವಶಟ್ಟಿ,ಡೈರಿ ಉಪಾಧ್ಯಕ್ಷ ಲಂಕೆ ಮಹೇಶ್, ಪಾನಿಪುರಿ ಉಮೇಶ್, ನಾಗೇಂದ್ರಪ್ಪ, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC