ಸರಗೂರು: ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸಂಸ್ಥಾಪಕರು ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಅವರ ಹುಟ್ಟು ಹಬ್ಬವನ್ನು ಪಟ್ಟಣದ ಬಸ್ ನಿಲ್ದಾಣದಿಂದ ಮಹಾವೀರ ಸರ್ಕಲ್ ವೃತ್ತ ವರೆಗೂ ಮೆರವಣಿಗೆ ಮಾಡಿಕೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡಿ ಹಾಗೂ ರೈತ ಅನ್ನದಾತರಿಗೆ ಅನ್ನದಾನ ನೀಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸಂಸ್ಥಾಪಕರು ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ, ನಾನು ದೊಡ್ಡ ಸಿದ್ಧಾಂತದ ಮೇಲೆ ನಮ್ಮ ಸಂಘಟನೆಯನ್ನು ಪ್ರಾರಂಭಿಸಿದ್ದು, ನಮ್ಮ ರಾಜ್ಯದ ಯಾವುದೇ ಮೂಲೆಯಲ್ಲಿ ನನ್ನ ಅನ್ನದಾತರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಆಗಮಿಸಿ ರೈತರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ನಾನು ಯಾವಾಗಲೂ ಸಿದ್ದ ಎಂದು ತಿಳಿಸಿದರು.
ನನ್ನ ಅನ್ನದಾತರು ಹಸಿವಿನಿಂದ ಇರಬಾರದು ಎನ್ನುವುದೇ ನನ್ನ ಉದ್ದೇಶ. ತಾಲ್ಲೂಕಿನ ಕಾಡಂಚಿನ ಭಾಗದಲ್ಲಿ ಹೆಚ್ಚು ರೈತರು ಇದ್ದಾರೆ. ಅರಣ್ಯದಿಂದ ಹಾಗೂ ಯಾವುದೇ ಇಲಾಖೆಯಿಂದ ನನ್ನ ಅನ್ನದಾತರಿಗೆ ತೊಂದರೆಯಾಗಬಾರದು ಎಂಬ ಕನಸು ನನಸಾಗಿಸಲು ಹೋರಾಟ ಮಾಡಲು ಸಿದ್ಧ. ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಯುವ ಘಟಕದ ರಾಜ್ಯಾಧ್ಯಕ್ಷ ಸಮಂತ್ ಎಸ್.ಬಿ. ಮಾತನಾಡಿ, ಈ ಪವಿತ್ರ ದಿನವು ಅವರ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಶಕ್ತಿಯನ್ನು ತುಂಬಿ, ಅವರ ಸೇವಾಯಾನವನ್ನು ಇನ್ನಷ್ಟು ಉಜ್ವಲವಾಗಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ತಮ್ಮ ಪ್ರಾಮಾಣಿಕತೆ, ಬದ್ಧತೆ ಮತ್ತು ದೃಢಚೇತನದ ಮೂಲಕ ಸಂಘದ ಬೆಳವಣಿಗೆಯ ಕಡೆಗೆ ಅವರು ಎಳೆದಿರುವ ದಾರಿ ನಮಗೆ ಸದಾ ಮಾರ್ಗದರ್ಶನವಾಗಿದೆ. ಸಂಘದ ಪ್ರತಿಯೊಬ್ಬ ಸದಸ್ಯನಿಗೂ ಪ್ರೇರಣೆಯ ಮೂಲವಾಗಿರುವ ಅವರ ನಾಯಕತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆ, ಸಂಘಶಕ್ತಿಯ ಬೆಳವಣಿಗೆ ಹಾಗೂ ಸಾಮಾಜಿಕ ನ್ಯಾಸಕ್ಕಾಗಿ ಬಳಸಲ್ಪಡಲಿ. ಅವರ ಉತ್ತಮ ಆರೋಗ್ಯ, ಕುಟುಂಬದ ಸಮೃದ್ಧಿ, ಹಾಗೂ ದೀರ್ಘಾಯುಷ್ಯಕ್ಕಾಗಿ ನಮ್ಮೆಲ್ಲರ ಹೃದಯಪೂರ್ವಕವಾಗಿ ಹಾರೈಸುತ್ತೇನೆ ಎಂದು ತಿಳಿಸಿದರು.
ಇಂದಿನ ಈ ವಿಶಿಷ್ಟ ದಿನವು ಅವರಿಗೆ ಶ್ರೇಷ್ಠ ಸ್ಮರಣೆಗಳಾಗಿ ಉಳಿಯಲಿ. ಅವರು ಬೆಳೆಸಿ ಹರಡಿದ ಮೌಲ್ಯಗಳು ಇನ್ನಷ್ಟು ಜನರ ಹೃದಯವನ್ನೂ ಮುಟ್ಟಲಿ. ಹುಟ್ಟುಹಬ್ಬದ ಈ ಸವಿನಯ ಕ್ಷಣದಲ್ಲಿ, ನಮ್ಮ ನಾಯಕರಿಗೆ ಶತಮಾನದಷ್ಟು ಆಯುಷ್ಯ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ, ಸಂಘದ ಪರವಾಗಿ ಹೃದಯಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇವೆ ಎಂದರು.
ಇದಿಕ್ಕೂ ಮುನ್ನ ತಾಲೂಕಿನ ನಾಡದೇವಿ ಚಿಕ್ಕ ದೇವಮ್ಮನ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಂಘದ ಪದಾಧಿಕಾರಿಗಳು ಬಸ್ ನಿಲ್ದಾಣದಿಂದ ಮಹಾವೀರ ಸರ್ಕಲ್ ಬಳಿ ವರೆಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ರೈತ ಅನ್ನದಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


