ಬೀದರ್: ಶಾಸಕ ಪ್ರಭು ಚವ್ಹಾಣ್ ಅವರ ಪುತ್ರ ಪ್ರತೀಕ್ ಚವ್ಹಾಣ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಎಸ್ ಐಟಿ ಗೆ ಒಪ್ಪಿಸಬೇಕು ಎಂದು ಏಕ್ತಾ ಫೌಂಡೇಶನ್ ನ ಅಧ್ಯಕ್ಷ ರವೀಂದ್ರ ಸ್ವಾಮಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತೀಕ್ ಚವ್ಹಾಣ್ ಅವರದ್ದು ಇದೊಂದೆ ಪ್ರಕರಣವಿಲ್ಲ. ಇನ್ನು ಹಲವಾರು ಯುವತಿಯರಿಗೆಅವರು ಇದೆ ರೀತಿ ಮಾಡಿ ಮೋಸ ಮಾಡಿದ್ದಾರೆ. ಪ್ರಭು ಚವ್ಹಾಣ್ ಅವರು ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವರಾಗಿದ್ದು, ಅವರು ತುಂಬಾ ಪ್ರಭಾವಿಯಾಗಿದ್ದಾರೆ. ಇದರಿಂದಾಗಿ ಈ ಪ್ರಕರಣವನ್ನು ಎಸ್ಐಟಿಯಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಂತ್ರಸ್ತೆ ಯುವತಿಯು ಪ್ರತೀಕ್ ಚವ್ಹಾಣ್ ಮೇಲೆ ಪ್ರಕರಣ ದಾಖಲಿಸಿದ ನಂತರ ಸಂತ್ರಸ್ತೆ ಯುವತಿಯ ಕುಟುಂಬಸ್ಥರ ಮೇಲೂ ಕೂಡ ಪ್ರಕರಣ ದಾಖಲು ಮಾಡಲಾಗುತ್ತದೆ. ಇದು ಹೆದರಿಸುವ ತಂತ್ರವಾಗಿದೆ.ಪ್ರತೀಕ್ ಚವ್ಹಾಣ್ ಮೇಲೆ ಆರೋಪವಿದ್ದರೂ ಸಹ ಅವರ ತಂದೆ ಪ್ರಭು ಚವ್ಹಾಣ್ ಅವರು ಸುದ್ದಿಗೋಷ್ಠಿ ನಡೆಸುತ್ತಾರೆ. ಆದರೆ ಪ್ರತೀಕ್ ಚವ್ಹಾಣ್ ಅವರು ಸುದ್ದಿಗೋಷ್ಠಿ ನಡೆಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ದಾಖಲಾಗಿ ಸುಮಾರು ದಿವಸ ಕಳೆದರೂ ಕೂಡ ಯಾವುದೇ ಒಂದು ಸಂಘಟನೆ, ಪಕ್ಷ ಯಾವೊಬ್ಬರು ಇದರ ವಿರುದ್ಧ ಧ್ವನಿ ಎತ್ತಂಗಿಲ್ಲ. ಯಾಕೆಂದರೆ ಧ್ವನಿ ಎತ್ತಿದವರ ವಿರುದ್ಧ ಸುಳ್ಳು ಆರೋಪ, ಸುಳ್ಳು ಪ್ರಕರಣ ದಾಖಲು ಮಾಡುವಷ್ಟು ಭಯದ ವಾತಾವರಣ ಔರಾದ್ ನಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಎಲ್ಲ ಕಾರಣಗಳಿಂದ ಈ ಪ್ರಕರಣವನ್ನು ಎಸ್ ಐಟಿಗೆ ಒಪ್ಪಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಂದೀಪ್ ಪಾಟೀಲ್, ಹಣ್ಮು ಪಾಜಿ, ತೇಜರಾವ್ ಮೂಳೆ, ಅಶೋಕ್ ಪಾಟೀಲ್ ಹೊಕ್ರಾಣಾ, ಧನಾಜಿ ಕಾಂಬಳೆ, ಪ್ರಭು ಸ್ವಾಮಿ ಹಾಗೂ ಪ್ರಕಾಶ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC