ಬೀದರ್: ಆಟೋದಲ್ಲಿ ಬಿಟ್ಟು ಹೋದ ಬೆಲೆಬಾಳುವ ಬಟ್ಟೆಗಳನ್ನು AI ಸಿ.ಸಿ. ಟಿವಿಯ ಸಹಾಯದ ಮೂಲಕ ವಾರಿಸುದಾರರಿಗೆ ತಲುಪಿಸಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ನಿವಾಸಿಯೊಬ್ಬರು ರಿಲಯನ್ಸ್ ಟ್ರೇಂಡ್ಸ್ ನಲ್ಲಿ 10 ಸಾವಿರ ರೂಪಾಯಿ ಬೆಲೆಬಾಳುವ ಬಟ್ಟೆಗಳನ್ನು ಖರೀದಿಸಿದ್ದರು. ಬಳಿಕ ಆಟೋವೊಂದರಲ್ಲಿ ಗುಂಪಾದಿಂದ ಬೀದರ್ ನ ಗುರುದ್ವಾರ್ ಕಮಾನವರೆಗೆ ಪ್ರಯಾಣಿಸಿದ್ದು, ಆಟೋ ದಿಂದ ಇಳಿಯುವ ವೇಳೆ ಬಟ್ಟೆಯ ಬ್ಯಾಗ್ ನ್ನು ಆಟೋದಲ್ಲೇ ಮರೆತು ಬಿಟ್ಟಿದ್ದರು.
ಸ್ವಲ್ಪ ಸಮಯದ ಬಳಿಕ ತಾವು ಖರೀದಿಸಿರುವ ಬಟ್ಟೆ ಆಟೋದಲ್ಲೇ ಮರೆತುಬಿಟ್ಟಿರುವುದು ಅರಿವಾಗಿದೆ. ಅವರು ತಕ್ಷಣವೇ ಬೀದರದ AI ಸಿ.ಸಿ ಟಿವಿ ಕಮಾಂಡ ಸೆಂಟರ್ ಗೆ ಆಗಮಿಸಿ ಮಾಹಿತಿ ನೀಡಿದ್ದಾರೆ. AI ಸಿ.ಸಿ ಟಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷವರ್ಧನ ಡಾ.ಬಿ.ಆರ್ ಅಂಬೇಡ್ಕರ ವೃತ್ತದ ಹತ್ತಿರ ವಾಹನ ಸಂಚರಿಸುತ್ತಿದ್ದನ್ನು ಗಮನಿಸಿ , ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಶ್ರೀಕಾಂತ್ ಅವರ ಸಹಾಯದ ಮೂಲಕ ಆಟೋವನ್ನು ಪತ್ತೆ ಹಚ್ಚಿದ್ದಾರೆ.
ಬಳಿಕ ಬೀದರ ಜಿಲ್ಲಾ ಪೊಲೀಸ್ ಅಧಿಕ್ಷಕರ ಕಛೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ ಆಟೋದ ಹಿಂಬದಿಯಲ್ಲಿ ಮರೆತುಬಿಟ್ಟಿದ್ದ ಬಟ್ಟೆಯ ಬ್ಯಾಗ್ ನ್ನು ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಆಟೋ ಚಾಲಕನ ಮುಖಾಂತರ ಹಸ್ತಾಂತರಿಸಲಾಯಿತು. ಇದೇ ವೇಳೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮಂಜುನಾಥ ಅವರಿಗೆ ಪೊಲೀಸರು ಅಭಿನಂದನೆ ಸಲ್ಲಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC