ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 11 ಮತಗಳ ಅಂತರದಿಂದ ಹೆಗ್ಗನೂರು ಮಾರಯ್ಯ ಆಯ್ಕೆಯಾದರು.
ಮುತ್ತುರಾಜ್ ಅಧ್ಯಕ್ಷ ಸ್ಥಾನದಿಂದ ತೇರವಾಗಿದ್ದ ಹಿನ್ನೆಲೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಅಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಎಸ್ ಸಿ ಮೀಸಲು ಕ್ಷೇತ್ರದಿಂದ ಹೆಗ್ಗನೂರು ಮಾರಯ್ಯ ಹಾಗೂ ಹುಲ್ಲೇಮಾಳ ಲೋಕೇಶ್ ನಾಮಪತ್ರ ಸಲ್ಲಿಸಿದರು.
ಆದರೆ ಇಬ್ಬರಲ್ಲಿ ಯಾರೊಬ್ಬರೂ ನಾಮಪತ್ರ ವಾಪಸ್ ಪಡೆಯದ ಕಾರಣ ಚುನಾವಣೆ ನಡೆಯಿತು. ಪಂಚಾಯಿತಿಯಲ್ಲಿ 14 ಸದಸ್ಯರು ಒಳಗೊಂಡು 13 ಸದಸ್ಯರು ಹಾಜರಿದ್ದರು.ಒಬ್ಬರು ಕಾರಣ ಅಂತರದಿಂದ ಗೈರು ಹಾಜರಾಗಿದ್ದರು.
ಹೆಗ್ಗನೂರು ಮಾರಯ್ಯ 11, ಹುಲ್ಲೇಮಾಳ ಲೋಕೇಶ್ 2 ಮತಗಳನ್ನು ಪಡೆದಿದ್ದರಿಂದ ಹೆಗ್ಗನೂರು ಮಾರಯ್ಯ ಹೆಗ್ಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಕಬಿನಿ ಕಾರ್ಯಪಾಲಕ ಅಭಿಯಂತರರು ಹಾಗೂ ಚುನಾವಣಾಧಿಕಾರಿ ಕೆ.ಆರ್.ಉಷಾ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಘೋಷಿಸಿದರು.
ನೂತನವಾಗಿ ಅಧ್ಯಕ್ಷರಾದ ಹೆಗ್ಗನೂರು ಮಾರಯ್ಯ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೂ . ಸಹಕಾರ ನೀಡಿದ ಮುಖಂಡರಿಗೆ ವಂದಿಸುವೆ. ಅಧ್ಯಕ್ಷನಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿ ಆದ್ಯತೆ ನೀಡಿ ಕೆಲಸ ಮಾಡಿಸಲಾಗುವುದು.ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ಪಂಚಾಯಿತಿವತಿಯಿಂದ ಹಾಗೂ ಅಧಿಕಾರಿಗಳಿಂದ ಕೆಲಸ ಕಾರ್ಯಗಳು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಾರನ್ನು ಪಂಚಾಯಿತಿಗೆ ಅಳೆದಾಡಿಸಬಾರದು ಎಚ್ಚರಿಕೆ ನೀಡಿ ಅಭಿವೃದ್ಧಿ ಕೆಲಸ ಬಗ್ಗೆ ಗಮನವಿರಲಿ ಎಂದು ತಿಳಿಸಿದರು.
ನಾನು ನಾಲ್ಕು ಬಾರಿ ಚುನಾವಣೆಯಲ್ಲಿ ಆಯ್ಕೆಯಾದರೂ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ.ಅದರೆ ಈ ಬಾರಿ ನನಗೆ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಅವಕಾಶವನ್ನು ನೀಡಿದ್ದಾರೆ.ಎಲ್ಲಾರಿಗೂ ವಂದನೆಗಳನ್ನು ತಿಳಿಸಿದರು. ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರುಕ್ಮಿಣಿ ಬಸವರಾಜು, ಸದಸ್ಯರು ಎಚ್.ಎನ್.ಸುಧೀರ್, ಪ್ರಮೀಳಾ ಮಹೇಶ್, ಡಿ.ಎಂ.ಶಿವಶಂಕರ್, ಎಂ.ಲೋಕೇಶ್, ಶೋಭಾರಾಣಿ ಲೋಕೇಶ್, ಚಿಕ್ಕಶಂಭೇಗೌಡ, ಮಂಜುಳಾ ಚೆಲುವರಾಜು, ಕೆ.ಬಿ.ಮುತ್ತುರಾಜ್, ಮಂಜುಳಾ ವಸಂತ ಕುಮಾರ್, ಡಿ.ಎಂ.ಸವಿತಾ, ನಾಗಮ್ಮ ನಾಗೇಂದ್ರ, ಮುಖಂಡರು ಪ್ರಭಾವಿ ಮುಖಂಡ ದೇವಲಾಪುರ ನಾಗೇಂದ್ರ, ಪ್ರಭಾಕರ್, ಮಾಜಿ ಗ್ರಾಪಂ ಅಧ್ಯಕ್ಷ ಗೋವಿಂದೇಗೌಡ, ರವಿಗೌಡ, ಎಲ್ಲಾ ಸಮಾಜದ ಯಜಮಾನರು ಸುರೇಶ್, ಮೋಹನಕುಮಾರ್ ಎಂ.ಸಿ., ಕೂಸೇಗೌಡ, ಮಹೇಶ್, ಶೇಖರ್ ಭೋವಿ, ಸೋಮಯ್ಯ, ವಿಜಯ್, ಶುಂಭುಲಿಂಗಯ್ಯ, ಮಹಾದೇವಯ್ಯ, ಸುಕೇಂದ್ರ, ಶಿವಲಿಂಗೇಗೌಡ, ಸಣ್ಣಕೂಸೇಗೌಡ, ಗೋವಿಂದೇಗೌಡ ಎಚ್.ಸಿ., ಸೋಮೇಗೌಡ, ಗುರುಸ್ವಾಮಿಶೆಟ್ಟಿ, ಆನಂದ, ಸೋಮೇಗೌಡ, ಶಿವಣ್ಣೇಗೌಡ, ಸಿಬ್ಬಂದಿ ವರ್ಗದವರು ಮಹೇಶ್, ಪ್ರಸನ್ನ, ಚೇತನ್ ಮಹೇಶ್ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ಪ್ರಭಾವಿ ಮುಖಂಡ ದೇವಲಾಪುರ ನಾಗೇಂದ್ರ ಮಾತನಾಡಿ, ಸಾಮಾನ್ಯ ಕ್ಷೇತ್ರದಿಂದ ಎಸ್ ಸಿ ಕ್ಷೇತ್ರಕ್ಕೆ ಪಂಚಾಯಿತಿ ಸದಸ್ಯರು ಹೆಗ್ಗನೂರು ಗ್ರಾಮ ಪಂಚಾಯಿತಿಯಲ್ಲಿ ಸಮಾನತೆ ಎಲ್ಲಾರಿಗೂ ಸದಸ್ಯರಿಗೆ ಸಿಕ್ಕಬೇಕು ಎಂದು ಸದಸ್ಯರು ನಿರ್ಣಯ ಮಾಡಿಕೊಂಡು. ಅದರಂತೆ ಸಾಮಾನ್ಯ ಕ್ಷೇತ್ರದಿಂದ ಎಸ್ ಸಿ ಮೀಸಲು ಕ್ಷೇತ್ರಕ್ಕೆ ಅವಕಾಶವನ್ನು ಬಳಸಿಕೊಂಡು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಐದು ವರ್ಷದಲ್ಲಿ ಐದು ಸದಸ್ಯರಿಗೆ ಅವಕಾಶ ನೀಡಲಾಗಿದೆ.ನಮ್ಮ ಪಂಚಾಯಿತಿಯಿಂದ ಬೇರೆ ಪಂಚಾಯಿತಿದವರಿಗೆ ಸಮಾನತೆ ಸಿಕ್ಕುವ ಮೂಲಕ ಹೆಗ್ಗನೂರು ಪಂಚಾಯಿತಿ ಮಾದರಿಯಾಗಬೇಕಾಗುವ ನಮ್ಮ ಆಸೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC