ಸರಗೂರು: ಹಳೆ ಮೈಸೂರು ಪ್ರಾಂತ್ಯ ಭಾಗದ ಎಚ್.ಡಿ.ಕೋಟೆ ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಅತಿ ಹೆಚ್ಚು ಸಮುದಾಯದ ಇರುವುದರಿಂದ ಶಾಸಕ ಸಿ.ಅನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸರ್ಕಾರಕ್ಕೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಅಭಾವೀಲಿಂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಆಗ್ರಹಿಸಿದರು.
ನಾಯಕ ಸಮಾಜದ ಪ್ರಮುಖ ನಾಯಕರಾದ ಶಾಸಕ ಅನಿಲ್ ಕುಮಾರ್ ಅವರು ಎರಡು ಬಾರಿ ಶಾಸಕರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಅವರ ತಂದೆ ದಿವಂಗತ ಎಸ್. ಚಿಕ್ಕಮಾದು ಅವರು ತಾಲೂಕಿನಲ್ಲಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಹಾಗಾಗಿ ತಂದೆಯ ಹಾದಿಯಲ್ಲಿ ಮಗ ನಡೆಯುತ್ತಿದ್ದಾರೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ಎಂದರು.
ರಾಜ್ಯದ ಗಡಿ ಭಾಗದಲ್ಲಿ ಇರುವ ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಗೊಂಡಿರುವ ಅನೀಲ್ ಚಿಕ್ಕಮಾದು ಅವರಿಗೆ ಒಂದೇ ಪಕ್ಷದಲ್ಲಿ ಬಾರಿ ಎರಡು ಬಾರಿ ಆಯ್ಕೆಯಾಗಿರುವ ಇತಿಹಾಸದಲ್ಲೇ ಇಲ್ಲ.ಅದನ್ನು ನಮ್ಮ ಶಾಸಕರು ಮಾಡಿ ತೊರಿಸಿದ್ದಾರೆ. ಸಚಿವ ಸ್ಥಾನ ನೀಡಲೇಬೇಕು ಎಂದು ತಿಳಿಸಿದರು.
ಹಳೆ ಮೈಸೂರು ಭಾಗದ ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಸರ್ಕಾರದಿಂದ ಅಧಿಕಾರಿ ಸಿಕ್ಕಿಲ್ಲ.ಅದರಿಂದ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಸಚಿವ ಸ್ಥಾನ ಸಿಕ್ಕುವ ಸಾದ್ಯತೆ ಇದೆ ನಂಬಿದ್ದೇವೆ. ನಾಯಕ ಸಮಾಜದ ಹಿರಿಯ ನಾಯಕರಾದ ರಾಜಣ್ಣ ಹಾಗೂ ನಾಗೇಂದ್ರ ಸಚಿವ ಸ್ಥಾನದಿಂದ ಕೈಬಿಟ್ಟಿರುವ ಕಾರಣದಿಂದ ಎಚ್.ಡಿ.ಕೋಟೆ ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನವನ್ನು ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ತಾಲೂಕಿನ ಜನಪ್ರಿಯ ಶಾಸಕ ಅನಿಲ್ ಚಿಕ್ಕಮಾದು ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ರಾಜಕೀಯ ಗುರುಗಳಾದ ಆರ್ ಧ್ರುವನಾರಾಯಣ್ ಹಾಗೂ ಚಿಕ್ಕಮಾದು ರವರ ನೇತೃತ್ವದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ.
ತಾಲೂಕಿನ ಅಭಿವೃದ್ಧಿ ಗೊಳಿಸಲು ನಾಲ್ಕು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ತಾಲ್ಲೂಕಿಗೆ ಬರಮಾಡಿಕೊಂಡು ಅವರಿಂದಲ್ಲೇ ಶಂಕುಸ್ಥಾಪನೆ ನೆರವೇರಿಸಿ. ಹಿಂದುಳಿದ ತಾಲ್ಲೂಕನ್ನು ಹೋಗಲಾಡಿಸಲು ಅಭಿವೃದ್ಧಿ ಕಾರ್ಯಗಳು ಮಾಡಿಕೊಂಡು ಬರುತ್ತಿದ್ದಾರೆ.ಇನ್ನೂ ಹೆಚ್ಚು ಕೆಲಸ ಮಾಡಲು ಯಾವುದೇ ಸಚಿವ ಸ್ಥಾನ ನೀಡಿದರೆ ತಾಲೂಕನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ.ಅವರ ಜೊತೆ ತಾಲೂಕಿನ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಶಾಸಕ ಅನಿಲ್ ಚಿಕ್ಕಮಾದು ಜೊತೆಯಲ್ಲಿ ಇರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC