ಸರಗೂರು: ಪ್ರತಿ ವ್ಯಕ್ತಿಯು ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು, ಹೇಗೆ ಶೀತ, ಜ್ವರ ಬಂದಾಗ ಡಾಕ್ಟರ್ ಗಳ ಬಳಿ ಹೋಗುತ್ತೇವೆ ಹಾಗೆಯೇ ಮನಸ್ಸಿಗೂ ಬೇಜಾರಾದಾಗ ಅಥವಾ ಮಾನಸಿಕ ಅಸ್ವಸ್ಥತೆ ಇದ್ದರೆ ಮಾನಸಿಕ ತಜ್ಞರ ಬಳಿ ತೋರಬೇಕೆಂದು ಮನೋವಿಜ್ಞಾನಿ ಬೇಬಿ ಫಾತಿಮಾ ತಿಳಿಸಿದರು.
ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಬುಧವಾರದಂದು ಮಾನಸಿಕ–ಸಾಮಾಜಿಕ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಅಜ್ಞಾನ ಮತ್ತು ಕಳಂಕವನ್ನು ನಿವಾರಿಸುವ ಅಗತ್ಯವಿದೆ ಎಂಬುದನ್ನು ಗಂಭೀರವಾಗಿ ಪ್ರಸ್ತಾಪಿಸಿದರು
ಅವರು ತಮ್ಮ ಉಪನ್ಯಾಸದಲ್ಲಿ ಈ ಕೆಳಗಿನ ವಿಷಯಗಳ ಕುರಿತು ಮನದಟ್ಟಾಗಿ ವಿವರಿಸಿದರು:
ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಅರ್ಥ, ಮಾನಸಿಕ ಅಸ್ವಸ್ಥತೆಗಳ ವಿವರಣೆ, ಅವುಗಳ ವಿಧಗಳು, ಲಕ್ಷಣಗಳು ಮತ್ತು ಚಿಹ್ನೆಗಳು, ಕಾರಣಗಳು ಮತ್ತು ತಡೆಯುವ ಮಾರ್ಗಗಳು, ಮಿದುಳಿನ ಆರೋಗ್ಯದ ಮಹತ್ವ — “ಮಾನಸಿಕ ಆರೋಗ್ಯವಿಲ್ಲದೆ ದೈಹಿಕ ಆರೋಗ್ಯ ಸಾಧ್ಯವಿಲ್ಲ ಮೊದಲಾದ ಮಾಹಿಗಳನ್ನು ತಿಳಿದರು.
ಇದಕ್ಕೂ ಮೇರೆಗೆ, ಬಿಬಿ ಫಾತಿಮಾ ಅವರು ಮಾನಸಿಕ ಒತ್ತಡದ ನಿರ್ವಹಣಾ ತಂತ್ರಗಳು ಕುರಿತು ಪ್ರಾಯೋಗಿಕ ಸೂಚನೆಗಳನ್ನು ನೀಡಿದರು. ಔಷಧಿ ನಿಯಮಿತವಾಗಿ ತೆಗೆದುಕೊಳ್ಳುವುದು, ಅದರ ಮಹತ್ವ ಹಾಗೂ ಜೀವನಶೈಲಿಯನ್ನು ಹೇಗೆ ವೃದ್ಧಿಗೊಳಿಸಬೇಕು ಮತ್ತು ನಿರಂತರ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು. ಅವರು ಚಿಕಿತ್ಸಾ ಶಿಬಿರದ ಸೌಲಭ್ಯಗಳು ಹಾಗೂ ನಿರ್ವಹಣಾ ಸಹಾಯ ಪುನರ್ವಸತಿ ಬಗ್ಗೆ ತಿಳಿಸಿದರು.
ಎಪಿಡಿ ಸಂಸ್ಥೆಯ ಸೇವೆಗಳು, ಆರೋಗ್ಯ ಮತ್ತು ನಗದು ಸಹಾಯ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರದ ಯೋಜನೆಗಳು ಇವುಗಳ ಬಗ್ಗೆ ವಿವರವಾಗಿ ತಿಳಿಸಿದರು, ಹಾಗೂ ಪಡಿತರದಾರರು ಹೇಗೆ ಇದರಲ್ಲಿ ನೇರವಾಗಿ ಲಾಭ ಪಡೆಯಬಹುದು ಎಂಬುದನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಪ್ರಕಾಶ್ ಎ., ಡಾ.ಪೂರ್ಣಿಮಾ , ಸಾಹಿಲ್ , ಕ್ಷೇತ್ರ ಸಹಾಯಕ ಕುಮಾರಸ್ವಾಮಿ, ರಾಣಿ, ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಗೂ ಸರಗೂರು ತಾಲ್ಲೂಕಿನ ತಾಲ್ಲೂಕು ಸಂಯೋಜಕ, ಸರಗೂರು ತಾಲ್ಲೂಕಿನ ಮಾನಸಿಕ ಅಸ್ವಸ್ಥರು ಹಾಗೂ ಅವರ ಆರೈಕೆದಾರರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ನೆರವಾದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


