ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 79ನೇ ಸ್ವಾತಂತ್ರ್ಯವ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 2024– 25ನೇ ಸಾಲಿನ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಬೆಳಕುಣಿ (ಚೌದ್ರಿ) ಗ್ರಾಮದ ಹೆಮ್ಮೆಯ ವಿದ್ಯಾರ್ಥಿಗೆ ಎಮ್.ಬಿ.ಬಿ.ಎಸ್.ಪ್ರವೇಶ ಪಡೆದುದ್ದಕ್ಕಾಗಿ ಸರಕಾರಿ ಪ್ರೌಢಶಾಲೆ. ಎಸ್ ಡಿ. ಎಂ ಸಿ. ಅಧ್ಯಕ್ಷ ಎಂ ಡಿ. ನಯುಮ್ ಅವರು ವಿದ್ಯಾರ್ಥಿಗಳಿಗೆ ಶಾಲು ಮತ್ತು ಹೂವು ಗುಚ್ಛವನ್ನು ಕೊಟ್ಟು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರೌಢ ಶಾಲೆ ಮುಖ್ಯ ಗುರುಗಳು ಉಮಾಕಾಂತ್ ಚೋಪಡೆ, ಶಾಲೆಯ ಶಿಕ್ಷಕರು ಹಾಗೂ ಗ್ರಾಮದ ಪ್ರಮುಖ ಮುಖಂಡರು ಭೀಮಣ್ಣ ಗಂದಿಗೆ, ಸತ್ಯನಾರಾಯಣ ಠಾಕೂರ್, ಪರಮೇಶ್ವರ ಮೇತ್ರೆ, ಗ್ರಾಪಂ ಸದಸ್ಯ ಕರಬಸಪ್ಪಾ ಸೊರಾಳೆ, ಮಹೇಶ್ ಚಾಬೋಳೆ, ಗ್ರಾಪಂ ಸದಸ್ಯ ದೆವಿದಾಸ ಮಾಳಗೆ, ಮಾಜಿ ಸೈನಿಕ ಬಸವರಾಜ ಶಿಪೂಜೆ, ಮಾಜಿ ಗ್ರಾಪಂ ಅಧ್ಯಕ್ಷ ದೇವಿದಾಸ ಧೂಳೆ, ಜೀವನ ಮಾಳೆಗೆ, ರಾಜಕುಮಾರ್ ಹಚಕಮಟೆ, ಪ್ರಭಾಕರ್ ಇಂಗಳೇ, ರಾಜಕುಮಾರ್ ಮಳೆಗೆ, ಅಲ್ಲಾವುದ್ದೀನ್ ಹಾಗೂ ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


