ಔರಾದ: ತಾಲೂಕಿನ ಲಾಧಾ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರಿಯಲ್ಲಿ ನಿವೃತ್ತರಾದವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮ ಧ್ವಜಾರೋಹಣ ಅಧ್ಯಕ್ಷರಾದ ನಾಗಪ್ಪ ಮುಸ್ತಾಪುರ್ ನೆರವೇರಿಸಿದರು. ಉದ್ಘಾಟಕರಾಗಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮೀಠಾರೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ಮಿಠಾರೆ, ಉಪಾಧ್ಯಕ್ಷರಾದ ಅಂಬಿಕ ರಾಜಕುಮಾರ್ ಗಾದಗೆ, ಪ್ರದೀಪ್ ಕುಮಾರ್ ಮಿಠಾರೆ, ಈರಮ್ಮ ಶಂಕರ್, ಸಂಗೀತ ಬೀರಪ್ಪ, ಝರುಬಾಯಿ ಪ್ರಭುಶೆಟ್ಟಿ, ದೇವಿದಾಸ್ ಪವಾರ್, ಸುನಿಲ್ ರಾಥೋಡ್, ಶಿವಕಾಂತ್ ಮುಚಳಬೆ, ಎವನ್ ಕುಮಾರ್ ಲಾಧಕರ್, ಧನರಾಜ್ ಮುಸ್ತಾಪುರ್, ಸಂಜು ಕುಮಾರ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


