ಸರಗೂರು: ವಾಹನಗಳು ವೇಗ ನಿಯಂತ್ರಣದ ಜತೆಗೆ ರಸ್ತೆ ಅಪಘಾತ ತಪ್ಪಿಸಲೆಂದು ಪಟ್ಟಣದ ವಿವಿಧ ಕಡೆಗಳಲ್ಲಿ ಇರುವ ಸ್ಪೀಡ್ ಬ್ರೇಕರ್ ಅಳವಡಿಸಲಾಗಿತ್ತು, ಆದರೆ ಸ್ಪೀಡ್ ಬ್ರೇಕರ್ ಅಳಿಸಿ ಹೋಗಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿದ್ದರಿಂದ ನಾವೇ ಸ್ಪೀಡ್ ಬ್ರೇಕರ್ ಗಳಿಗೆ ಬಣ್ಣ ಬಳಿಯುವ ಕಾರ್ಯ ಮುಂದುವರಿಸುತ್ತಿದ್ದೇನೆ ಪ.ಪಂ. ಸದಸ್ಯ ಶ್ರೀನಿವಾಸ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಎಚ್.ಡಿ.ಕೋಟೆ ಮತ್ತು ಬೇಗೂರು ಮುಖ್ಯ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಗಳು ಇದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸ್ಪೀಡ್ ಬ್ರೇಕರ್ ಗಳಿಗೆ ಬಣ್ಣ ಬಳಿದೆ ಇರುವ ಕಾರಣದಿಂದ ಪಪಂ ಸದಸ್ಯ ಹಾಗೂ ಮುಖಂಡರು ಸ್ವಾತಂತ್ರ್ಯ ದಿನಾಚರಣೆಯಂದು ಬಣ್ಣ ಬಳಿಯುವ ಕೆಲಸ ಮಾಡಿ ಮಾನವೀಯತೆ ಮೆರೆತಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚಳವಾಗುತ್ತಿದೆ. ವಾಹನಗಳು ಹಾಗೂ ಬೈಕ್ ಸವಾರರು ಹೆಚ್ಚಾಗಿದ್ದರಿಂದ ಸ್ಪೀಡ್ ಬ್ರೇಕರ್ ಗಳಲ್ಲಿ ಜೀಬ್ರಾ ಕ್ರಾಸ್ ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಆದರಿಂದ ನಾವುಗಳು ದಿನನಿತ್ಯ ನೋಡಿಕೊಂಡು ಬರುವುತ್ತಿದ್ದೇವೆ. ಆದರೆ ಅಧಿಕಾರಿಗಳಿಗೆ ಗಮನಕ್ಕೂ ತಂದರೂ ಕೆಲಸ ಮಾಡಿಲ್ಲ ಎಂದು ಅಳಲು ತೋಡಿಕೊಂಡರು.
ರಸ್ತೆ ಉಬ್ಬುಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಲಾದ ಈ ಉಬ್ಬುಗಳು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ, ರಸ್ತೆ ಸುರಕ್ಷತೆಗಾಗಿ ರಸ್ತೆ ಉಬ್ಬುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಭಾರೀ ತುರ್ತಲ್ಲಿ ವಾಹನ ಚಲಾಯಿಸುವಾಗಲೋ, ಬೀದಿದೀಪ ಕೆಟ್ಟು ಹೋದ ರಸ್ತೆಗಳಲ್ಲಿ, ಕೆಲವೇ ಕ್ಷಣ ರಸ್ತೆಯಿಂದ ದೃಷ್ಟಿ ತೆಗೆದು ಮೈಮರೆತರೂ ಏಕಾಏಕಿ ನಮ್ಮ ವಾಹಗಳನ್ನ ಹಾರಿಸಿಬಿಡುತ್ತದೆ. ಅಸಲಿಗೆ ಈ ರೀತಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ ಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಕಿರೋದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅಪಘಾತ ತಪ್ಪಿಸಲು ಮುಂದಾಗಬೇಕು ಬಣ್ಣ ಬಳಿಯುವ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಮುಜೀಬ್, ಗ್ರಾಮಲೆಕ್ಕಿಗರ ಪುರುಷೋತ್ತಮ್, ಮುಖಂಡ ರವಿ, ಗ್ರಾಮ ಸೇವಕ ಸಿದ್ದರಾಜು, ಇನ್ನೂ ಮುಖಂಡರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC