ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 257 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ವಿವರ: ಒಟ್ಟು ಹುದ್ದೆ 257
ಅಂಗನವಾಡಿ ಕಾರ್ಯಕರ್ತರು – 29
ಅಂಗನವಾಡಿ ಸಹಾಯಕರು – 228
ಎಲ್ಲೆಲ್ಲಿ ಎಷ್ಟು ಉದ್ಯೋಗ:
ಭರಮಸಾಗರ: 7 ಕಾರ್ಯಕರ್ತೆಯರು, 23 ಸಹಾಯಕಿಯರು
ಚಿತ್ರದುರ್ಗ: 2 ಕಾರ್ಯಕರ್ತೆಯರು, 21 ಸಹಾಯಕಿಯರು
ಚಳ್ಳಕೆರೆ: 2 ಕಾರ್ಯಕರ್ತೆಯರು, 21 ಸಹಾಯಕಿಯರು
ಹಿರಿಯೂರು: 2 ಕಾರ್ಯಕರ್ತೆಯರು, 53 ಸಹಾಯಕಿಯರು
ಹೊಳಲ್ಕೆರೆ: 4 ಕಾರ್ಯಕರ್ತೆಯರು, 45 ಸಹಾಯಕಿಯರು
ಹೊಸದುರ್ಗ: 11 ಕಾರ್ಯಕರ್ತೆಯರು, 53 ಸಹಾಯಕಿಯರು
ಮೊಳಕಾಲ್ಮೂರು: 1 ಕಾರ್ಯಕರ್ತೆಯರು, 21 ಸಹಾಯಕಿಯರು
ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಪಿಯುಸಿ ಪೂರ್ಣಗೊಳಿಸಿರಬೇಕು. ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿ ಅರ್ಜಿ ಸಲ್ಲಿಸುವ ಗ್ರಾಮ/ತಾಲೂಕು, ನಗರದ ಖಾಯಂ/ 3 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅಲ್ಲಿಯ ನಿವಾಸಿಯಾಗಿರಬೇಕು.
ವಯೋಮಿತಿ: ಕನಿಷ್ಠ 19 ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ: ಮೆರಿಟ್, ಸಂದರ್ಶನದ ಮೂಲಕ ಆಯ್ಕೆ.
ಅರ್ಜಿ ಸಲ್ಲಿಕೆ: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ karnemakaone.kar.nic.in ಇಲ್ಲಿಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು.
ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 5 ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC