ಸರಗೂರು: ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ಮುಳ್ಳೂರು ವಲಯದ ಹೊಸಕಡಜಟ್ಟಿ ಕಾರ್ಯಕ್ಷೇತ್ರದಲ್ಲಿ ಪ್ರಕ್ರತಿ ಜ್ಞಾನ ವಿಕಾಸ 5 ವರ್ಷದ ವಾರ್ಷಿಕೋತ್ಸವ ಶನಿವಾರ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಾತಿ, ಮತ, ಭೇದ ಇಲ್ಲದೆ ಪ್ರತಿಯೊಂದು ಕುಟುಂಬವೂ ಸಂಸ್ಕಾರಯುತ ಕುಟುಂಬವಾಗಿಸುವತ್ತ ಜ್ಞಾನ ವಿಕಾಸ ಕೇಂದ್ರದ ಮೂಲಕ ಆರೋಗ್ಯ, ಕಾನೂನು, ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
4 ವರ್ಷಗಳ ಹಿಂದೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪಾದಾರ್ಪಣೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನಾದ್ಯಂತ ಸಹಸ್ರಾರು ಸಂಘಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಗುರಿ ನಮ್ಮದಲ್ಲ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಂತೆ ಮಾಡುವುದೇ ಆಗಿದೆ. ಸಮನ್ವಯ ಅಧಿಕಾರಿ ಬೃಂದಾ, ಸದಸ್ಯರು ಹೆಚ್ಚು ಅಭಿವೃದ್ಧಿ ಆಗಬೇಕು ನಿಮ್ಮ ಕೇಂದ್ರ ಪ್ರಬುದ್ಧ ಕೇಂದ್ರ ಆಗಬೇಕು ಎಂದು ಹೇಳಿದರು.
ಮಹಿಳೆಯರು ಸಂಘದ ಧ್ಯೇಯೋದ್ದೇಶಗಳನ್ನು ಅರಿತು ವ್ಯವಹರಿಸುವುದು ಬಹಳ ಮುಖ್ಯ, ಇತ್ತೀಚಿನ ದಿನಗಳಲ್ಲಿ ಬಣ್ಣದ ಮಾತುಗಳನ್ನಾಡಿ ಏಕಾಏಕಿ ನಿಮಗೆ ಸಾಲ ನೀಡಿ ಸಾಲದ ಸುಳಿಯಲ್ಲಿ ನಿಮ್ಮನ್ನು ಸಿಲುಕಿಸಲು ಬರುವ ಸಂಘಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ವ್ಯವಹರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದ ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದಂತ ನರಸಿಂಹಮೂರ್ತಿ, ಸಮನ್ವಯ ಅಧಿಕಾರಿ ಬೃಂದಾ, ಕೇಂದ್ರ ಸಭೆಯ ಅಧ್ಯಕ್ಷೆ ಗುರುಲಿಂಗಮ್ಮ, ಇನ್ನೂ ಮುಖಂಡರು ಸೇರಿದಂತೆ ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಸೇವಾ ಪ್ರತಿನಿಧಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


