ಮಧುಗಿರಿ: ಅಬಕಾರಿ ವಿಭಾಗ ವ್ಯಾಪ್ತಿಯ ಮಧುಗಿರಿ ಹಾಗೂ ಕೊರಟಗೆರೆಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಾಗಿರುವ ಮದ್ಯ ಹಾಗೂ ಸೆಂದಿಯನ್ನು ಪರಿಸರಕ್ಕೆ ಹಾನಿಯಾಗದಂತೆ ನಾಶಪಡಿಸಲಾಗಿದೆ ಎಂದು ಡಿವೈಎಸ್ ಪಿ ದೀಪಕ್ ಎಸ್.ತಿಳಿಸಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮಾಡಗನಹಟ್ಟಿ ಬಳಿ ಇರುವ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಗುರುವಾರ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯ ಹಾಗೂ ಸೆಂದಿ ನಾಶಪಡಿಸಿ ಮಾತನಾಡಿದ ಅವರು, ಅಬಕಾರಿ ಉಪಯುಕ್ತರ ಆದೇಶದಂತೆ ಮಧುಗಿರಿ ವಲಯ ವ್ಯಾಪ್ತಿಯಲ್ಲಿ ಪೊಲೀಸ್ ಹಾಗೂ ಅಬಕಾರಿಯಲ್ಲಿ ವಿವಿಧ 14 ಪ್ರಕರಣಗಳಲ್ಲಿ ಜಪ್ತಾದಂತ 1110 ಲೀಟರ್ ಸೆಂದಿ 36 ಲೀಟರ್ ಐಎಂಎಲ್, 32 ಲೀ ಬಿಯರ್ ಅದೇ ರೀತಿ ಕೊರಟಗೆರೆ ವಲಯ ವ್ಯಾಪ್ತಿಯಲ್ಲಿ ದಾಖಲಾದ 3 ಪ್ರಕರಣಗಳಲ್ಲಿ 147 ಲೀಟರ್ ಬಿಯರ್ ಹಾಗೂ 3 ಲೀಟರ್ ಐಎಂಎಲ್ ಅಕ್ರಮ ಮದ್ಯ ನಾಶಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ನಾಗರಾಜು ಹೆಚ್.ಕೆ. ಶ್ರೀಲತಾ ಬಿ., ಕೆ.ಎಸ್.ಬಿ.ಸಿ.ಎಲ್. ಡಿಪೋ ಮ್ಯಾನೇಜರ್ ವೀರರೆಡ್ಡಿ, ಅಬಕಾರಿ ಉಪ ನಿರೀಕ್ಷಕರಾದ ಮನು ಬಿ.ಜೆ., ಪ್ರಭಾಕರ್, ತಾಲ್ಲೂಕು ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಸಿಬ್ಬಂದಿಗಳಾದ ರಾಜೇಶ್, ರಮೇಶ್, ಹಮೀದ್, ಜಗದೀಶ್, ತೌಸೀಫ್, ಮಂಜುಳಾ ಇದ್ದರು.
ವರದಿ: ಅಬೀದ್ ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC