ಸರಗೂರು: ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರಲು ಕೆಲವರು ಷಡ್ಯಂತ್ರ ನಡೆಸಿದ್ದು, ಇದರ ಹಿಂದಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಪ.ಪಂ. ಮುಂಭಾಗದವರೆಗೂ ಶನಿವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂರಕ್ಷಣಾ ಅಭಿಯಾನ ಸಮಿತಿವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭಗವಾಧ್ವಜ ಹಿಡಿದು ಬಂದ ಕಾರ್ಯಕರ್ತರು ಧರ್ಮ ಉಳಿಸಲು ಧರ್ಮ ಯುದ್ಧ ಎಂದು ಘೋಷಣೆ ಕೂಗಿದರು. ಹಿಂದೂ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮೈಕ್ ಪ್ರೇಮ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಹಿಂದೂ ದೇವರ ದೇವಾಲಯಗಳಿಗೆ ಕನ್ನ ಹಾಕುತ್ತಿದೆ. ಇದೀಗ ಅವರ ಮುಖವಾಡ ಬಯಲಾಗಿದೆ. ಧರ್ಮ ಉಳಿಯಬೇಕಾದರೆ ಹಿಂದೂಗಳ ಒಗ್ಗಟ್ಟು ಮುಖ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ದೇವಸ್ಥಾನಗಳ ವಿಷಯದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರುವ ಷಡ್ಯಂತ್ರದ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳಿಗೆ ಕನ್ನ ಹಾಕುತ್ತಿದೆ ಎಂದು ಆರೋಪಿಸಿ, ಹಿಂದೂಗಳ ಒಗ್ಗಟ್ಟಿಗೆ ಕರೆ ನೀಡಿದರು. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸುವ ಬದಲು ಹಿಂದೂಗಳ ಮೇಲೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭಜರಂಗ ದಳದ ಸೈನೆ ಅಧ್ಯಕ್ಷ ಮಂಡ್ಯ ಮಂಜುನಾಥ ಮಾತನಾಡಿ, ಹಿಂದೆ ಬ್ರಿಟೀಷ್ ಹಾಗೂ ಪೋರ್ಚಗೀಸರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ್ದು ಕೇಳಿದ್ದೇವೆ. ಆದರೆ ಇಂದು ನೋಡುವ ಪರಿಸ್ಥಿತಿ ಬಂದಿದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೊಡಿಸುವ ಬದಲು ಹಿಂದೂಗಳ ಮೇಲೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧ್ಯವಾದರೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು. ಅದನ್ನು ಬಿಟ್ಟು ತಾರತಮ್ಯ ಮಾಡಬಾರದು. ಯೂಟ್ಯೂಬರ್ ಗೆ ಕೆಪಿಸಿಸಿಯ ಬೆಂಬಲ ಇದೆ. ಷಡ್ಯಂತ್ರದ ಹಿಂದೆ ಇರುವ ಎಲ್ಲರನ್ನೂ ಬಂಧಿಸಬೇಕು ಎಂದರು.
ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಗ್ರೇಟ್ 2 ತಹಶೀಲ್ದಾರ್ ಪರಶಿವಮೂರ್ತಿ ಜಿಲ್ಲಾಧಿಕಾರಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ನೂರಳಾಸ್ವಾಮಿ, ವಿನಾಯಕ ಪ್ರಸಾದ್, ಮುಖಂಡರು ಎಚ್.ಸಿ.ಲಕ್ಷಣ್, ಮನುಗನಹಳ್ಳಿ ಮಂಜುನಾಥ, ಸಿ.ಕೆ.ಗಿರೀಶ್, ಜೆಡಿಎಸ್ ಪಕ್ಷದ ಮುಖಂಡ ಜಯಪ್ರಕಾಶ್, ಮುಖಂಡರು ರಾಮಚಂದ್ರ, ನವೀನ್,ಚನ್ನಪ್ಪ, ಗೋಬಿ ರಾಮಣ್ಣ, ಆನಂದ ಮೈಲಾರಿ, ಅಭಿ, ಶ್ರೀವತ್ಸ, ಗುರುಸ್ವಾಮಿ, ರಾಕೇಶ್ ಭಟ್ಟ, ಉಮೇಶ್, ರಮೇಶ್, ಪೈಂಟ್ ನಾಗರಾಜು, ನಾಗರಾಜು, ರಾಜು, ರಮೇಶ್, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC