nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗ್ಯಾಂಗ್ ರೇಪ್ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    September 3, 2025

    ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ: ಸಿಎಂನ್ನು  ಭೇಟಿಯಾದ ಭಾರತಿ, ಅನಿರುದ್ಧ್

    September 3, 2025

    ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು ಅಂತ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ: ಕುಣಿಗಲ್ ಶಾಸಕ ರಂಗನಾಥ್

    September 3, 2025
    Facebook Twitter Instagram
    ಟ್ರೆಂಡಿಂಗ್
    • ಗ್ಯಾಂಗ್ ರೇಪ್ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್
    • ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ: ಸಿಎಂನ್ನು  ಭೇಟಿಯಾದ ಭಾರತಿ, ಅನಿರುದ್ಧ್
    • ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು ಅಂತ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ: ಕುಣಿಗಲ್ ಶಾಸಕ ರಂಗನಾಥ್
    • ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ: ಮಾಜಿ ಸಚಿವ ಕೆ.ಎನ್.ರಾಜಣ್ಣ
    • ಔರಾದ್ ಟಿಎಚ್‍ ಒ ವಿರುದ್ಧ ದೂರು: ಕ್ರಮಕ್ಕೆ ಸೂಚನೆ
    • ಕರ್ನಾಟಕದ ಬಾಡಿ ಬಿಲ್ಡರ್‌ ಅಮೆರಿಕದಲ್ಲಿ ಅಪಘಾತಕ್ಕೆ ಬಲಿ
    • ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಶಾಕ್: ಓರ್ವ ಸಾವು, ಇಬ್ಬರು ಗಂಭೀರ
    • “ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ, ಚಿಂತಿಸಬೇಡ”: ಪತ್ರಕರ್ತೆಗೆ ಆರ್.ವಿ. ದೇಶಪಾಂಡೆ ಅವಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ಕಾರಿ ಕೆರೆಯ ಫಲವತ್ತಾದ ಮಣ್ಣು ರಾತ್ರಿ ವೇಳೆ ಬಗೆದು ಫ್ಯಾಕ್ಟರಿ ಒಳಗೆ ಸಾಗಾಟ
    ಕೊರಟಗೆರೆ September 2, 2025

    ಸರ್ಕಾರಿ ಕೆರೆಯ ಫಲವತ್ತಾದ ಮಣ್ಣು ರಾತ್ರಿ ವೇಳೆ ಬಗೆದು ಫ್ಯಾಕ್ಟರಿ ಒಳಗೆ ಸಾಗಾಟ

    By adminSeptember 2, 2025No Comments2 Mins Read
    koratagere
    •  ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣು
    • ರಸ್ತೆಗೆ ಮಣ್ಣು ಸುರಿದ್ದಿದ್ದರಿಂದ ಅಪಘಾತ ಸಂಭವಿಸಿ 3 ಜನರಿಗೆ ಗಾಯ

    ವರದಿ: ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣಿನಿಂದ ಅಪಘಾತ ಸಂಭವಿಸಿ 3 ಜನ ಗಾಯಾಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


    Provided by
    Provided by

    ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಸಮೀಪ ಇರುವ ವಿಶಾಲ್ ನ್ಯಾಚರಲ್ ಫುಡ್ ಪ್ರಾಡೆಕ್ಟ್ ಇಂಡಿಯಾ ಪ್ರವೇಟ್ ಲಿಮಿಟೆಡ್‌ ನ ವ್ಯವಸ್ಥಾಪಕ ಕ್ರಮವಾಗಿ ರಾತ್ರೋರಾತ್ರಿ ಮಣ್ಣು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಟಿಪ್ಪರ್ ಲಾರಿ ಒಳಗೆ ಹೋಗದೇ ಕೊರಟಗೆರೆ ಬೆಂಗಳೂರು ರಸ್ತೆಯ ರಾಜ್ಯ ಹೆದ್ದಾರಿಯ ಮಧ್ಯ ಭಾಗದಲ್ಲಿ ಸುರಿದು ಹೋಗಿದ್ದಾರೆ.

    ಮಧುಗಿರಿ ತಾಲೂಕಿನ ಕತ್ತಿರಾಜನಹಳ್ಳಿ ಗ್ರಾಮದ ಸಿದ್ದೇಶ್, ಕಮಲ, ಹೇಮಂತ್ ಎನ್ನವವರ ಸ್ಕೂಟಿ ವಾಹನದಲ್ಲಿ ಬೆಂಗಳೂರು ಮಾರ್ಗವಾಗಿ ಆಗಮಿಸುತ್ತಿದ್ದರು, ರಸ್ತೆ ಮಧ್ಯೆ ಸುರಿದ ಮಣ್ಣು ಕಣ್ಣಿಗೆ ಕಾಣದೆ ಮಣ್ಣಿನ ಮೇಲೆ ಹಾರಿ ಎದುರಿಗೆ ಬರುತ್ತಿದ್ದ ಓಮಿನಿ ವಾಹನಕ್ಕೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ಜಖಂಯಾಗಿದ್ದು, ಗಾಯಾಳುಗಳಿಗೆ ಕಾಲು ಕೈಗೆ ಬಲವಾಗಿ ಹೊಡೆತ ಬಿದ್ದ ಕಾರಣ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ರಾತ್ರೋರಾತ್ರಿ ಮಣ್ಣು ಸುರಿದು ಈ ಅವಗಡಕ್ಕೆ ಸಂಭಂದಿಸಿದ ವ್ಯವಸ್ಥಾಪಕರ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರಿಗೆ ಅಲ್ಲಿನ ಸೆಕ್ಯೂರಿಟಿಗಳು ದಮಕಿ ಹಾಕಿದ್ದಾರೆ ಎಂದು ಸಾರ್ವಜನಿಕ ತಿಳಿಸಿದರು.

    ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಣ್ಣು ಮಾಫಿಯಾ ಹೆಗ್ಗಿಲ್ಲದೇ ಸಾಗುತ್ತಿದ್ದು, ಕೆರೆಯ ಮಣ್ಣು ರಾತ್ರಿ ವೇಳೆ ಬಗೆದು ಫ್ಯಾಕ್ಟರಿ ಒಳಗೆ ಸಾಗಿಸುತ್ತಿದ್ದರೂ ಯಾವುದೆ ಅಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಮಣ್ಣು ಮಟ್ಟ ಮಾಡುತ್ತಿದ್ದ ಜೆಸಿಬಿ ಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

    ಏಕಾಏಕಿ ಸುಮಾರು 5–10 ಲೋಡ್ ಗಳಷ್ಟು ಮಣ್ಣು ಹೆದ್ದಾರಿಗೆ ಸುರಿದು ಬೇಜಾವಾಬ್ದಾರಿ ವರ್ತನೆ ತೋರಿದ ಮಾಲೀಕ ಹಾಗೂ ವ್ಯವಸ್ಥಾಪಕರ ಈ ನಡೆಗೆ ಅಪಘಾತ ನಡೆದಿದ್ದು ಫ್ಯಾಕ್ಟರಿ ಮಾಲೀಕನ ವಿರುದ್ದ ಕ್ರಮ ಜರಿಗಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

    ಕೊರಟಗೆರೆ–ದಾಬಸ್‌ಪೇಟೆ ರಾಜ್ಯ ಹೆದ್ದಾರಿಯಲ್ಲಿ ಇರುವ ಈ ಫ್ಯಾಕ್ಟರಿ ಮುಂದೆ ಯಾವುದೆ ಸೂಚನ ಫಲಕವಾಗಲಿ ಅಥವಾ ಅಪಘಾತ ವಲಯ ಎಂದಾಗಲಿ ಅಳವಡಿಸಿಲ್ಲ. ಪದೇ ಪದೇ ಇಲ್ಲಿ ಅಪಘಾತ ಸಂಭಿಸುತ್ತಿವೆ. ತಿಂಗಳಿಗೆ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ಆಸ್ಪತ್ರೆ ದಾಖಲಾಗುತ್ತಿದ್ದು, ರಾತ್ರಿ ಈ ಸುರಿದ ಮಣ್ಣಿನಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ಸವಾರರು ಪಾರದಾಡುವಂತಾಗಿತ್ತು.

    ಪೊಲೀಸರ ಮೇಲೆಯೇ ದರ್ಪ:

    ಪ್ಯಾಕ್ಟರಿಯ ವ್ಯವಸ್ಥಾಪಕರನ್ನ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರನ್ನ ನಿಯಂತ್ರಣ ಮಾಡಲು ಬಂದ ಪೂಲೀಸ್ ಅಧಿಕಾರಿಗಳ ಮೇಲೆ ಐವರು ಸೆಕ್ಯೂರಿಟಿಗಳು ದರ್ಪ ಮೆರೆದಿದ್ದಾರೆ. ನಂತರ ಪೂಲೀಸ್ ಅಧಿಕಾರಿಗಳು ಸೆಕ್ಯೂರಿಟಿಗಳಿಗೆ ತರಾಟೆ ತೆಗೆದುಕೊಂಡರು. ನಂತರ ಸಾರ್ವಜನಿಕರನ್ನ ಮನವಲಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದರು.

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಹೆದ್ದಾರಿಗೆ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು. ಇದೇ ವೇಳೆ ಸ್ಥಳಕ್ಕೆ ಕೋಳಾಲ ಪಿಎಸ್ ಐ ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೆಸ್ಕಾಂ ಇಲಾಖೆ ವತಿಯಿಂದ 48ನೇ ವರ್ಷದ ವಿದ್ಯುತ್ ಗಣಪತಿ ವಿಸರ್ಜನಾ ಕಾರ್ಯಕ್ರಮ

    September 2, 2025

    ದೇಶದ ಸಂಪ್ರದಾಯ, ಆಚಾರ, ವಿಚಾರಗಳನ್ನು ಯುವ ಪೀಳಿಗೆ ಆಸಕ್ತಿಯಿಂದ ಕಾಪಾಡಬೇಕು: ಡಾ.ಜಿ.ಪರಮೇಶ್ವರ್

    September 2, 2025

    ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ

    August 30, 2025
    Our Picks

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಗ್ಯಾಂಗ್ ರೇಪ್ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    September 3, 2025

    ಬೆಂಗಳೂರು: ಆರ್‌ಎಂಸಿ ಯಾರ್ಡ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರ್‌.ಆರ್.ನಗರ ಶಾಸಕ ಮುನಿರತ್ನ ಅವರಿಗೆ ವಿಶೇಷ ತನಿಖಾ ದಳ…

    ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ: ಸಿಎಂನ್ನು  ಭೇಟಿಯಾದ ಭಾರತಿ, ಅನಿರುದ್ಧ್

    September 3, 2025

    ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು ಅಂತ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ: ಕುಣಿಗಲ್ ಶಾಸಕ ರಂಗನಾಥ್

    September 3, 2025

    ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ: ಮಾಜಿ ಸಚಿವ ಕೆ.ಎನ್.ರಾಜಣ್ಣ

    September 3, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.