ತುಮಕೂರು: ತುಮಕೂರು ಜಿಲ್ಲೆ ಜೆ.ಜೆ.ಎಮ್. ಗುತ್ತಿಗೆದಾರರು ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂದೆ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಜೆ.ಜೆ.ಎಮ್. ಕಾಮಗಾರಿ ಮಾಡಿರುವ ಗುತ್ತಿಗೆದಾರರು ಪ್ರತಿಭಟನೆ ಮಾಡಿ ಮೆನೇಜರ್ ಸಿದ್ದರಾಜು ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆ ಉದ್ದೇಶಿಸಿ ಗುತ್ತಿಗೆದಾರರಾದ ಚಂದ್ರಶೇಖರ್ ರೆಡ್ಡಿ ಮಾತನಾಡಿ, ತುಮಕೂರು ಜಿಲ್ಲೆಯ ಜೆ.ಜೆ.ಎಮ್. ಗುತ್ತಿಗೆದಾರರು ಮನೆಮನೆ ಗಂಗೆ ಕಾಮಗಾರಿಯನ್ನು ಜಿಲ್ಲೆಯ ನೂರಾರು ಗುತ್ತಿಗೆದಾರರು ಕೆಲಸ ಮಾಡಿದ್ದು, ವರ್ಷಗಳೇ ಕಳೆದರೂ ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ ದಯವಿಟ್ಟು ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದೆ ಬಂದು ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರಾದ ಲೋಕೇಶ್ ಪಾಳೇಗಾರ್ ಮಾತನಾಡಿ, ಜಿಲ್ಲೆಯ ಜೆ.ಜೆ.ಎಮ್. ಗುತ್ತಿಗೆದಾರರ ಸಮಸ್ಯೆಗಳಾದ ಸಿ.ಸಿ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಇ.ಓ.ಟಿ. ಹಾಗೂ ವರ್ಕ್ ಸ್ಲಿಪ್ ಗೆ ಸಂಬಂಧಿಸಿದಂತೆ ಕಡತಗಳನ್ನು ತಡೆಹಿಡಿಯದೆ ಗುತ್ತಿಗೆದಾರರಿಗೆ ತೊಂದರೆ ಆಗದಂತೆ ಕಡಿಮೆ ದಂಡ ವಿಧಿಸಿ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು
ಪ್ರತಿಭಟನೆ ಉದ್ದೇಶಿಸಿ ಗುತ್ತಿಗೆದಾರರಾದ ಚಿನ್ನಪ್ಪ ರೆಡ್ಡಿ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಯನ್ನು ಬಗೆಹರಿಸಿ ಇಲ್ಲವೇ ಗುತ್ತಿಗೆದಾರರಿಗೆ ವಿಷ ಕೊಡಿ ಸಾಲ ಮಾಡಿ ಕಾಮಗಾರಿಗಳನ್ನು ಮಾಡಿದ್ದರು ವರ್ಷಗಳಾದರೂ ಹಣ ಬಾರದೇ ಇರುವುದರಿಂದ ಗುತ್ತಿಗೆದಾರರ ಸಂಕಷ್ಟದಲ್ಲಿದ್ದೇವೆ, ಬೇರೆ ಜಿಲ್ಲೆಗಳಲ್ಲಿ ಕಡಿಮೆ ದಂಡ ಹಾಕಿ ಇ.ಓ.ಟಿ. ಫೈನಲ್ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಅಧಿಕಾರಿಗಳು ಈ.ಓ.ಟಿ. ಸಮಸ್ಯೆಯನ್ನು ಬಗೆಹರಿಸಿ ಫೈನಲ್ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲೆಯ. ಗುತ್ತಿಗೆದಾರರಾದ ಪಾಲ ನಾಯ್ಕ್, ದಿವಾಕರಪ್ಪ, ವೀರಾರೆಡ್ಡಿ, ರಮೇಶ್, ಮಂಜುನಾಥ್, ಬ್ರಹ್ಮಾನಂದ ರೆಡ್ಡಿ, ಸಂತೋಷ್ ಕುಮಾರ್, ಮಾರಪ್ಪ, ಸತೀಶ್ ರೆಡ್ಡಿ, ಗಂಗಾಧರಯ್ಯ, ಸುಬ್ರ ನಾಯ್ಕ್, ರಾಮಸ್ವಾಮಿ ಪಾಂಡುರಂಗಪ್ಪ, ರಘು ಹರೀಶ್, ಷಣ್ಮುಖ ಸ್ವಾಮಿ, ರವಿ ಕುಮಾರ್, ಮೋಹನ್ ವಿಜಯ್ ಕುಮಾರ್ ನರಸಿಂಹಯ್ಯ, ಮಲ್ಲಿಕಾರ್ಜುನಯ್ಯ ಹನುಮಂತರಾಯಪ್ಪ ಮುಂತಾದ ನೂರಾರು ಗುತ್ತಿಗೆದಾರರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ. ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC