ಸರಗೂರು : ಮೈಸೂರಿನ ಅಗ್ರಹಾರದಲ್ಲಿ ನಡೆದ ಶುಕ್ರವಾರದಂದು ಶ್ರೀ ದುರ್ಗಾ ಫೌಂಡೇಶನ್ ನ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಮೈಸೂರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಸ್ವೀಕರಿಸಿ ನಂತರ ಮಾತನಾಡಿದ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಳಸೂರು ಬಸವರಾಜುರವರು ಸಮಾಜ ಸೇವೆಗಳಲ್ಲಿ ತನು, ಮನದ ಸೇವೆಗಳು ಶ್ರೇಷ್ಠತೆ ಪಡೆದುಕೊಂಡಿವೆ. ಪ್ರತಿಯೊಬ್ಬರು ಧನವಿದ್ದರೆ ಮಾತ್ರ ಸೇವೆ ಮಾಡಬಹುದು ಎಂಬ ಮನೋಭಾವನೆಯಿಂದ ಹೊರಬಂದು, ತನು, ಮನ ಸೇವೆ ಸಲ್ಲಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೇ ಇರಬೇಕು ಅಂತಿಲ್ಲ. ಅವರ ವ್ಯಕ್ತಿತ್ವ ಇದ್ದರೆ ಸಾಕು. ಇದಕ್ಕೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ ಅವರು ಹಾಗೂ ಫೌಂಡೇಶನ್ ಪದಾಧಿಕಾರಿಗಳು ನಮ್ಮನ್ನು ಗುರುತಿಸಿ ಪ್ರಶಸ್ತಿ ಪ್ರದಾನ ನೀಡಿದಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ರಮೇಶ್ ರಾಮಪ್ಪ, ಕಾವ್ಯ, ಉಮೇಶ್ ವನಸಿರಿ, ಲಕ್ಷ್ಮೀ ನಾರಾಯಣ ಯಾದವ್, ಬೀರೇಶ್ ಹನಗೂಡು, ನಟರಾಜ್, ಕೆ. ಬಸವರಾಜ್, ಮಾಲಿನಿ ಮಲ್ಲೇಶ್, ಕೆ. ಸುಶೀಲ ರಾವ್, ಶಾರದ, ಸಂಧ್ಯಾ ರಾಣಿ, ಸೌಮ್ಯ,ನಾಗೇಂದ್ರ ಕುಮಾರ್ ಅವರಿಗೆ ಮೈಸೂರು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ನಗರಪಾಲಿಕಾ ಮಾಜಿ ಸದಸ್ಯೆ ಪ್ರಮೀಳಾ ಭರತ್, ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ដ. ರಾಘವೇಂದ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಪತ್ರಕರ್ತ ರಾಘವೇಂದ್ರ, ಪವನ್, ಸಿದ್ದರಾಮು, ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್, ರೂಪ ಗೌಡ, ದೀಪಾ ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


