ಕೊರಟಗೆರೆ : ಪಟ್ಟಣದ ಗಣಪತಿ ಬಸ್ಟಾಂಡ್ ಸರ್ಕಲ್ ನ ಶ್ರೀಸತ್ಯಗಣಪತಿ ಸನ್ನಿದಾನದಲ್ಲಿ 65ನೇ ವರ್ಷದ ವಾರ್ಷಿಕ ಹಬ್ಬದ ಅಂಗವಾಗಿ ಎಸ್ ಆರ್ ಎಸ್ ಬಸ್ ಮಾಲೀಕರಾದ ದಿವಂಗತ ಎನ್.ಆರ್.ರೇವಣ್ಣಪ್ಪ ಹಾಗೂ ಕುಟುಂಬದವರಿಂದ ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಯಶಸ್ವಿ ಕಂಡಿತ್ತು.
ಎಸ್ ಆರ್ ಎಸ್ ಬಸ್ ಮಾಲೀಕ ಮಂಜುನಾಥ್ ನಾಗಪ್ರಸಾದ್ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಶ್ರೀಸತ್ಯಗಣಪತಿ ಸನ್ನಿದಾನದಲ್ಲಿ ಪ್ರತಿವರ್ಷ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಆಯೋಜಿಸಿಕೊಂಡು ಬರುತ್ತಿದ್ದು, ಭಕ್ತರು ಹೆಚ್ಚಿನ ಸಂಖೈಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದಾರೆ. ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ. ತಂದೆಯವರ ನಡೆದು ಬಂದ ಹಾದಿಯನ್ನು ನಾವು ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು.
ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಮಾತನಾಡಿ, ಎರಡು ವರ್ಷಗಳಿಂದ ನಮ್ಮ ಕೊರಟಗೆರೆಯಲ್ಲಿ ನಗರದ ಎಲ್ಲಾ ಗಣಪತಿ ಪ್ರತಿಷ್ಠಾಪನೆ ಮಂಡಳಿಗಳು ನಿಗದಿತ ದಿನದಲ್ಲಿ ಒಟ್ಟಾರೆ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಸಹೋದರತ್ವ ಭಾವನೆಯನ್ನು ಮೆರೆಯುತ್ತಿರುವುದು ಖುಷಿಯ ವಿಚಾರ. ನಮ್ಮ ತಾಲ್ಲೂಕು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗೃಹ ಸಚಿವರ ಕ್ಷೇತ್ರದಲ್ಲಿ ಸ್ನೇಹ ಪ್ರೀತಿಯ ವಿಶೇಷ ಕಾರ್ಯಕ್ರಮ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಣಪತಿ ವಿಸರ್ಜನೆ ಕಾರ್ಯಕ್ರಮ ಯಶಸ್ವಿಗೊಳಲ್ಲಿ ಎಂದು ಶುಭಹಾರೈಸಿದರು.
ಪ.ಪಂ. ಸದಸ್ಯ ಕೆ.ಆರ್ ಒಬಳರಾಜು ಮಾತನಾಡಿ, ಪ್ರತಿವರ್ಷದಂತೆ ನಾಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಯ ಮುಖೇನಾ ಶ್ರೀಸತ್ಯ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಸಹಸ್ರಾರು ಸಂಖೈಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪಿಎಸ್ ಐ ತೀರ್ಥೇಶ್, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಲತಾ ಮಂಜುನಾಥ್, ಸದಸ್ಯರಾದ ಭಾಗ್ಯಮ್ಮ ಗಣೇಶ್, ಓಬಳರಾಜು, ನಟರಾಜ್, ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಎಸ್ ಆರ್ ಎಸ್ ಬಸ್ ಮಾಲೀಕರ ಕುಟುಂಬದ ಪ್ರಮುಖರು ಸೇರಿದಂತೆ ಸತ್ಯಗಣಪತಿ ಸೇವಾ ಸಮಿತಿಯವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC