ಸರಗೂರು: ತಾಲೂಕಿನ ಕೆ.ಬೆಳತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಬಡಾವಣೆ ಗ್ರಾಮದ ನಿವಾಸಿಯಾದ ಕೆಂಪರಾಜು ತನ್ನ ಊರಿನ ಅಂಗನವಾಡಿ ಮಕ್ಕಳಿಗೆ 18– 20 ಸಮವಸ್ತ್ರ ವಿತರಣೆ ಮಾಡಿದರು.
ಇದೇ ವೇಳೆ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅಲ್ಲಿ ಬರುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಿ, ಯಾರು ಖಾಸಗಿ ಶಾಲೆಗೆ ಸೇರಿಸಬೇಡಿ. ನನ್ನ ಗ್ರಾಮದ ಶಾಲೆ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿ ಆದಂತೆ. ಎಂದು ಸಲಹೆ ನೀಡಿದರು.
ಇದೇ ವೇಳೆ ಅಂಗನವಾಡಿ ಟೀಚರ್ ಆದ ನಾಗೇಂದ್ರಿ ಹಾಗೂ ಜಯಲಕ್ಷ್ಮೀ, ಮಕ್ಕಳ ಪೋಷಕರು ಹಾಗೂ ಗ್ರಾಮದ ಮುಖಂಡರು ಸಂತೋಷ ವ್ಯಕ್ತಪಡಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


