ಸರಗೂರು: ಶಾಸಕ ಅನಿಲ್ ಚಿಕ್ಕಮಾದು ರವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆ.ಬೆಳತ್ತೂರು ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರು ಶಾಸಕ ಅನಿಲ್ ಚಿಕ್ಕಮಾದು ರವರ ನಿವಾಸಕ್ಕೆ ತೆರಳಿ ಹೂ ಗುಚ್ಛ ಹಾಗೂ ಸಿಹಿ ತಿನ್ನಿಸಿ ಗೌರವ ಸಲ್ಲಿಸಿದರು.
ನಂತರ ಕೆ.ಬೆಳತ್ತೂರು ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ ಮಾತನಾಡಿ, ನಮ್ಮ ತಾಲೂಕಿನ ಅಭಿವೃದ್ಧಿಕಾರ ಜನಪ್ರಿಯ ಶಾಸಕ ಎಂದು ಹೆಸರು ಪಡೆದುಕೊಂಡಿರುವ ವ್ಯಕ್ತಿ.ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧೆ ಮಾಡಿದರೂ ಅಲ್ಲಿ ಅವರು ವಿಜಯಶಾಲಿಯಾಗಿ ಬರುತ್ತಿದ್ದಾರೆ ಎಂದರು.
ತಂದೆ ದಿ ಮಾಜಿ ಶಾಸಕ ಚಿಕ್ಕಮಾದು ಹಾಗೂ ದಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ರವರ ಶಿಷ್ಯರಾಗಿ ಅವರ ಹಾದಿಯಲ್ಲಿ ಬರುವುದರಿಂದ ಬೆಳೆವಣಿಗೆ ಇನ್ನೂ ಉನ್ನತ ಮಟ್ಟಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ, ಬಿ.ಎಂ. ಪ್ರಕಾಶ್, ನಾಗೇಂದ್ರ, ಗೋಪಾಲ್ ರಾಜು, ಮಂಜುನಾಥ, ಅಂಗಡಿ ಶ್ರೀನಿವಾಸ, ರವಿ,ಕೆಂಪನಾಯಕ, ಟಿ.ಪಿ.ಚಿಕ್ಕಣ್ಣ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


