ಔರಾದ: ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಗಾಯತ್ರಿದೇವಿ ಅವರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅವರ ವಿರುದ್ಧ ಕೆಲವರು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿರುವುದನ್ನು ರಾಜ್ಯ ಆದಿಜಾಂಬವ ಸಂಘದ ತಾಲೂಕು ಘಟಕ ಅಧ್ಯಕ್ಷರಾದ ಸುಂದರರಾಜ್ ಎಸ್. ಮುದ್ದಾಳೆ ಅವರು ಕಟುವಾಗಿ ಖಂಡಿಸಿದ್ದಾರೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಅವರಿಗೆ ತಹಶೀಲ್ದಾರ ಮುಖಾಂತರ ಸಲ್ಲಿಸಿದ ಮನವಿಯಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಣ ಹಿಂದುಳಿದ ಗಡಿ ಪ್ರದೇಶದ ಔರಾದ್ ತಾಲೂಕಿನಲ್ಲಿ ನಿರಂತರವಾಗಿ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಗಾಯತ್ರಿದೇವಿ ಅವರು ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡ್ತಿದ್ದಾರೆ ಎಂದರು.
ಇವರ ಸೇವೆಯನ್ನು ಗುರುತಿಸುವ ಮೂಲಕ ಕಳೇದ ತಿಂಗಳಷ್ಟೇ ಪ್ರತಿಷ್ಠಿತ ‘ಕನ್ನಡಪ್ರಭ’ ಹಾಗೂ ಸುವರ್ಣನ್ಯೂಸ್ ಸುದ್ದಿ ಸಂಸ್ಥೆ ‘ಹೇಲ್ತ್ ಕೇರ್ ಎಕ್ಸಲೇನ್ಸ್’ ಅವಾರ್ಡ್ ನೀಡುವ ಮೂಲಕ ಇವರ ಸೇವೆಯನ್ನು ಪರಿಗಣಿಸಿದೆ. ಇಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ತಾಲೂಕಿನಿಂದ ಹೊರ ಓಡಿಸಲು ಯಾವುದೋ ದುರುದ್ದೇಶದಿಂದ ಕೆಲವರು ಅನಗತ್ಯವಾಗಿ ವರ್ಗಾವಣೆಯ ಬೆದರಿಕೆಯ ತಂತ್ರಗಾರಿಕೆ ಮಾಡ್ತಿದ್ದಾರೆ. ಹೀಗಾಗಿ ಸದರಿಯವರನ್ನು ಇಲ್ಲಿಂದ ವರ್ಗಾವಣೆ ಮಾಡಿದಲ್ಲಿ ತಾಲೂಕಿನಲ್ಲಿ ಇಷ್ಟು ವರ್ಷಗಳ ಕಾಲ ಡಾ.ಗಾಯತ್ರಿದೇವಿ ಅವರನ್ನು ಮಾಡಿದ ಸೇವೆಗೆ ಅವಮಾನಿಸಿದಂತಾಗಲಿದ್ದು, ಸದರಿಯವರು ತಾಲೂಕಿನ ಹುದ್ದೆಯಲ್ಲಿ ಮುಂದುವರೆಯುವ ಮೂಲಕ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ತಾಲೂಕು ಅಧ್ಯಕ್ಷರಾದ ಸುಂದರರಾಜ ಅವರು ಸಚಿವರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸದರಿ ವೈದ್ಯರ ವಿರುದ್ಧ ವಿನಾಕಾರಣ ಬಂದ ದೂರನ್ನು ಪರಿಗಣಿಸುವ ಮೊದಲು ತಾಲೂಕಿನ ಸಮಗ್ರ ಅಭೀವೃದ್ಧಿ ದೃಷ್ಟಿಯಿಂದ ಡಾ.ಗಾಯತ್ರಿದೇವಿ ಅವರನ್ನು ಇಲ್ಲಿನ ಜನಾಭ್ರಿಪ್ರಾಯದ ವಿರುದ್ಧ ಕ್ರಮ ಕೈಗೊಳ್ಳದಂತೆ ತಮ್ಮಲ್ಲಿ ಆರೋಗ್ಯ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಅಜಯ ವರ್ಮ, ಅಮರ ಸಿಂಧೆ, ಪೀಟರ್, ಅಭಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


