ಸರಗೂರು: ಸುನೀಲ್ ಬೋಸ್ ಅಭಿಮಾನಿಗಳ ಬಳಗದ ನೂತನ ಅಧ್ಯಕ್ಷರಾಗಿ ದೇವಲಾಪುರ ಸಿದ್ದರಾಜುರನ್ನು ಹಿರಿಯರ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ತಾಲೂಕಿನ ಸಮೀಪದ ಹ್ಯಾಂಡ್ ಪೋಸ್ಟ್ ನ ಮೈರಾಡ ಪಾನ್ ಸಭಾಂಗಣದಲ್ಲಿ ಬುಧವಾರದಂದು ನಡೆದ ಸಂಸದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷರ ಆಯ್ಕೆ ಬಗ್ಗೆ ಹಾಗೂ ಬಲಗೈ ಸಮಾಜದ ಕುಂದುಕೊರತೆಗಳ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡು ಸಮಾಜದ ಹಿರಿಯರ ಸಮ್ಮುಖದಲ್ಲಿ ಸಂಸದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ನೂತನ ಅಧ್ಯಕ್ಷರಾಗಿ ದೇವಲಾಪುರ ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಯಿತು .
ನಂತರ ಮಾತನಾಡಿದ ನೂತನ ಅಧ್ಯಕ್ಷ ದೇವಲಾಪುರ ಸಿದ್ದರಾಜು, ತಾಲೂಕಿನ ಜನತೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಸ್.ಸಿ.ಮಹದೇವಪ್ಪ ಮತ್ತು ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಂಸದ ಸುನೀಲ್ ಬೋಸ್ ರವರ ಮಾರ್ಗದರ್ಶನದಲ್ಲಿ ಈ ಬಳಗವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ಎಲ್ಲಾ ಸಮಾಜ ಅಭಿವೃದ್ಧಿ ಕೆಲಸ ಹೆಚ್ಚಿನ ಆದ್ಯತೆ ನೀಡಿ ಇವರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಸಂಶೋಧಕ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಡಾ.ಮರಿದೇವಯ್ಯ ಮಾತನಾಡಿ, ನೂತನ ಅಧ್ಯಕ್ಷರಾದ ಸಿದ್ದರಾಜಣ್ಣರವರು ಸಚಿವ ಡಾ.ಎಸ್.ಸಿ.ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ತುಂಬಾ ಹತ್ತಿರದಲ್ಲಿ ಇದ್ದಾರೆ. ಅವರ ಮೂಲಕ ತಾಲೂಕಿನ ಬಡ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ಕೊಡಿಸಿಕೊಂಡು ಬರುತ್ತಿದ್ದಾರೆ. ಅವರನ್ನು ನಮ್ಮ ಬಲಗೈ ಸಮಾಜದ ಸಮ್ಮುಖದಲ್ಲಿ ಅವರನ್ನು ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡು ಇನ್ನಷ್ಟು ನಮ್ಮ ಸಮಾಜದ ಬಂಧುಗಳಿಗೆ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿದ್ದೇವೆ. ಅದರಂತೆ ಸಿದ್ದರಾಜಣ್ಣರವರು ನಮ್ಮ ಸಮಾಜದ ಜನರಿಗೆ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರು ತಿಮ್ಮಯ್ಯ, ಕುಳ್ಳಯ್ಯ, ದೊಡ್ಡಯ್ಯ, ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್, ಸದಸ್ಯ ಮಹೇಶ್, ಬಿ.ಶಿವಣ್ಣ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಸಹಳ್ಳಿ ನವೀನ್, ಮುಖಂಡರು ಹಳಿಯೂರು ಚಿನ್ನಣ್ಣ, ಹಳೆಹೆಗ್ಗುಡಿಲು ಸೋಮಣ್ಣ, ತುಂಬಸೋಗೆ ನಾಗಣ್ಣ, ಬಿಡಗಲು ಗೋಪಾಲ್, ಮಲ್ಲಿಕಾರ್ಜುನ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಕಳೆಶ್, ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಹುಣಸಹಳ್ಳಿ ನಾಗರಾಜು, ಉಯ್ಯಂಬಳ್ಳಿ ನಾಗರಾಜು, ಮುಳ್ಳೂರು ಮಂಜು,ಸೂರ್ಯ ಕುಮಾರ್, ರಂಗಸ್ವಾಮಿ, ಕಾಮಿಸ್ವಾಮಿ, ಪ್ರಭಾಕರ್, ರಾಜು, ಅಗತ್ತೂರು ಮಹೇಶ್, ಬಿದರಹಳ್ಳಿ ಸೋಮೇಶ್, ನರಸಿಪುರ ಶ್ರೀನಿವಾಸ, ಸೋಮು, ಸೋಮಣ್ಣ, ಶಿವಲಿಂಗ, ವೆಂಕಟಸ್ವಾಮಿ, ಮಾಲವಿಂಕ್, ಶಿವು, ರೈತ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ಹಳೆಹೆಗ್ಗುಡಿಲು, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


