ಕೊರಟಗೆರೆ : ಶಿಕ್ಷಕ ವೃತ್ತಿ ಪುಣ್ಯದ ಕೆಲಸ. ರಾಜಕೀಯ ಸ್ಥಿತಿಗತಿಯಲ್ಲಿ ಶಿಕ್ಷಕರು ಪ್ರಶಸ್ತಿಗಳಿಸುವುದು ಸುಲಭದ ಮಾತಲ್ಲ, ಸಮುದಾಯದ ಪ್ರೌಢಶಾಲಾ ಶಿಕ್ಷಕರೊಬ್ಬರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದಿರುವುದು ನಮ್ಮ ಹೆಮ್ಮೆ ಎಂದು ಸಮುದಾಯದ ಮುಖಂಡ ಈರಣ್ಣ ತಿಳಿಸಿದರು.
ಕೊರಟಗೆರೆಯ ಯಾದವ ಗೊಲ್ಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಅಭಿನಂದನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಮುದಾಯದ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ಆಗಿ ಅಧಿಕಾರ ಸ್ವೀಕರಿಸಿದ ದೀಪಕ್ ಅವರಿಗೆ ಸಮುದಾಯದ ಮುಖಂಡರು ವಿಶೇಷವಾಗಿ ಸ್ವಾಗತಿಸಿದ್ದು, ಮತ್ತೋರ್ವ ಸಮುದಾಯದ ಸರ್ಕಾರಿ ಅಧಿಕಾರಿ ನಾಗರಾಜು ಇಲ್ಲಿನ ತೋಟಗಾರಿಗೆ ಇಲಾಖೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲಾ ಸಮುದಾಯ ಜನರ ಪ್ರೀತಿ, ವಿಶ್ವಾಸಗಳಿಸಿ ಈಗ ಪಾವಗಡಕ್ಕೆ ವರ್ಗಾವಣೆ ಯಾಗಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿ ಬೀಳ್ಕೋಡುಗೆ ನೀಡಿದರು.
ರಂಗಭೂಮಿ ಕಲಾವಿದ ಸಂಘದ ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ರಾಜ್ಯ ಮಟ್ಟದ ಶ್ರೇಷ್ಠ ಪ್ರಶಸ್ತಿ ಪಡೆದ ಸಮುದಾಯದ ಶಿಕ್ಷಕ ಚಿಕ್ಕಪ್ಪಯ್ಯ ಅಭಿನಂದನೆ, ತೋಟಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದ ನಾಗರಾಜು ರವರಿಗೆ ಬೀಳ್ಕೊಡುಗೆ, ಲೋಕೋಪಯೋಗಿ ಇಲಾಖೆಗೆ ಎಇಇ ಆಗಿ ಅಧಿಕಾರ ಸ್ವೀಕರಿಸಿದ ದೀಪಕ್ ರವರಿಗೆ ಸ್ವಾಗತ ಕೋರಿ ವಿಶೇಷವಾಗಿ ಗೌರವಿಸಲಾಗಿದೆ ಎಂದು ಹೇಳಿದರು.
ರಾಜೀವ್ ಗಾಂಧಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿಕ್ಕಪ್ಪಯ್ಯ ಮಾತನಾಡಿ, 28 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರೀತಿಗಳಿಸಿರುವುದು ನನ್ನ ಪುಣ್ಯ. ಶಿಕ್ಷಕ ವೃತ್ತಿಯಲ್ಲಿನ ಪ್ರಾಮಾಣಿಕತೆ ಕೆಪಿಸಿಸಿ ಶಿಕ್ಷಕರ ಘಟಕ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಗೌರವಿಸಿದ್ದು ಈ ಘಟಕಕ್ಕೆ ಕೃತತಜ್ಞತೆ ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೆಂಕಟೇಶ್, ನರೇಂದ್ರ ಕುಮಾರ್, ಆನಂದ್‌ಕುಮಾರ್, ದೇವರಾಜ್, ನರಸಿಂಹಮೂರ್ತಿ, ಕೃಷ್ಣಪ್ಪ, ಹೊಸಕೋಟೆ ಕೃಷ್ಣಪ್ಪ, ಮುತ್ತುರಾಜ್, ಚಿಕ್ಕಪ್ಪಯ್ಯ, ಬೈರಗೊಂಡ್ಲು ಚಂದ್ರು, ಪುಟ್ಟಣ್ಣ, ನಾಗರಾಜು, ನರಸಿಂಹಮೂರ್ತಿ, ನರಸೇಗೌಡ, ರಾಮಕೃಷ್ಣಯ್ಯ ಸೇರಿದಂತೆ ಇತರರು ಇದ್ದರು.
ರಾಷ್ಟ್ರಪತಿ ಪದಕ ಪುರಸ್ಕೃತರಿಗೆ ಗೌರವ:
ಕೊರಟಗೆರೆ ಪೊಲೀಸ್ ಠಾಣೆಯಲ್ಲಿನ ಹಲವು ವರ್ಷಗಳ ಪ್ರಾಮಾಣಿಕ ಸೇವೆಗೆ ಸಿಪಿಐ ಅನಿಲ್ ಅವರಿಗೆ ರಾಷ್ಟ್ರಪತಿ ಪದಕ ಭಾಗ್ಯ ಒದಗಿ ಬಂದಿದೆ. ಕೊರಟಗೆರೆ ಯಾದವ ಗೊಲ್ಲ ಸಮುದಾಯಕ್ಕೆ ಇದು ಖುಷಿಯ ವಿಚಾರವಾಗಿದೆ ಎಂದು ಸಮುದಾಯದ ಮುಖಂಡರು ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಗೌರವಿಸಿ ಶುಭ ಹಾರೈಸಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC