ಸರಗೂರು: ಸತ್ವಯುತ ಆಹಾರ ಸೇವನೆ ಮಾಡುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಾದನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾದನೂರು ಪ್ರಕಾಶ್ ಹೇಳಿದರು.
ತಾಲೂಕಿನ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಹಾದನೂರು ಗ್ರಾಮದ ಅಂಗನವಾಡಿ ಸಭಾಂಗಣದಲ್ಲಿ ಸೋಮವಾರದಂದು ಬಡಗಲಪುರ ಆರೋಗ್ಯ ಕೇಂದ್ರ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪೌಷ್ಟಿಕ ಶಿಬಿರ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ದೇಹದಲ್ಲಿ ಸರಾಗವಾಗಿ ರಕ್ತ ಸಂಚಲನೆಯಾಗುತ್ತಿದ್ದರೆ ಅಂಥಹ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳು ಸಾವನ್ನಪ್ಪುತ್ತಿದ್ದು. ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕ ಆಹಾರ ವಿತರಣೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಇರುವಂತಹ ಗರ್ಭಿಣಿಯರು ಸತ್ವಯುತ ಆಹಾರ ಸೇವನೆಯಿಂದ ಮುಂದೆ ಜನಿಸುವ ಮಗುವಿಗೆ ಮತ್ತು ತಾಯಿಗೆ ಒಳ್ಳೆಯದಾಗುತ್ತದೆ. ಈ ಕುರಿತಂತೆ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ತರ ಜವಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಶಿಶು ಆರೈಕೆ ಮತ್ತು ಸ್ತ್ರೀಯರು ಮೇಲ್ವಿಚಾರಕಿ ಜಯಶ್ರೀ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರು ಯಾವ ಯಾವ ಆಹಾರ ಪದಾರ್ಥಗಳು ಸೇವಿಸುವುದು ಸೂಕ್ತ ಎನ್ನುವ ಜಾಗತಿ ಮೂಡಿಸುವ ಸಲುವಾಗಿ ನಾನಾ ಬಗೆಯ ಆಹಾರ ಪದಾರ್ಥ, ತರಕಾರಿ, ಕಾಳುಗಳು ಪ್ರದರ್ಶಿಸಲಾಗುತ್ತಿದ್ದು ಅದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಒಂದು ವೇಳೆ ರಕ್ತ ಸಂಚಲನ ಸರಿಯಾಗಿಲ್ಲದಿದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಾಗಾಗಿ ಪೌಷ್ಟಿಕ ಆಹಾರ ಸೇವಿಸಬೇಕು, ನಿತ್ಯ ವ್ಯಾಯಾಮ ಮಾಡಬೇಕು. 10 ದಿನಗಳಿಂದ ಉಚಿತವಾಗಿ ನೀಡುತ್ತಿರುವ ಪಿಸಿಯೋಥೆರಪಿ ಚಿಕಿತ್ಸೆ ಜನರಿಗೆ ಉಪಯೋಗವಾಗಿದೆ ಎಂದು ಹೇಳಿದರು.
ಹದಿ–ಹರಿಯದ, ಕಿಶೋರಿಯರು ಹಸಿ ತರಕಾರಿ ಸೇವಿಸುವುವದರೊಂದಿಗೆ ನೆನಸಿದ ಕಾಳು ಸೆವಿಸಬೇಕು. ಇದರೊಂದಿಗೆ ವೈದ್ಯರ ಸಲಹೆ ಪಡೆದು ಹಾಲ್ಬೆಡೋಜಲ್ ಮಾತ್ರೆ ಸೇವಿಸಿದರೆ ಅಪೌಷ್ಟಿಕತೆ ದೂರವಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆಯರು ಸುನೀತಾ, ನಾಗಮ್ಮ, ಜಯಶೀಲ, ಮುಖಂಡರು ಶಶಿಕುಮಾರ್, ಸಿದ್ದರಾಜು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC