ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪೂರ ಗ್ರಾಮದ ಮರಿಯ ಕೃಪಾ ದವಾಖಾನೆ, ದೀಪಾಲಿಯ ಸಮಾಜ ಸೇವಾ ಸಂಸ್ಥೆ ಸಂತಪೂರ, ಆರ್ಬಿಟ್ ಸಮಾಜ ಸೇವಾ ಹುಮ್ನಾಬಾದ್, ಹಾಗೂ ಎಸ್.ಬಿ.ಪಾಟೀಲ್ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಬೀದರ್, ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಸಂತಪೂರನ ಮರಿಯ ಕೃಪಾ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಆರೋಗ್ಯ ಶಿಬಿರ ಕಾರ್ಯಕ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂತಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ದಂತ ವೈದ್ಯಾಧಿಕಾರಿಗಳಾದ ರೇಣುಕಾರವರು ಉದ್ಘಾಟಿಸಿ ಮಾತನಾಡಿದರು. ಎಸ್.ಬಿ.ಪಾಟೀಲ್ ದಂತ ಮಹಾವಿದ್ಯಾಲಯದ ಎಚ್ ಓ ಡಿ ಸಿದ್ದಣ ಗೌಡ ಅವರು ದಂತ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು ಮತ್ತು ಜಾಗೃತಿಗೊಳಿಸಿದರು.
ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಔರಾದ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಅವರು ಮಾತನಾಡಿ, ದೀಪಾಲಯ ಸಂಸ್ಥೆ ಇತರ ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದ್ದರು.
ಹೋಲಿ ಕ್ರಾಸ್ ಚರ್ಚ್ ಫಾದರ್ ಕ್ಲಿವನ್ ಗೋಮ್ಸ್ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಮರಿಯಕ್ ರೂಪ ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ರೇಷ್ಮಾ, ಉಪನ್ಯಾಸಕರಾದ ಶಿವಕುಮಾರ್ ಮಠಪತಿ ಸ್ವಾಮಿ, ಮರಿಯ ಕೃಪಾ ದವಾಖಾನೆ ಮುಖ್ಯಸ್ಥರಾದ, ಸಿಸ್ಟರ್ ಶಕುಂದಾ, ದೀಪಾಲಿಯ ಸಮಾಜ ಸೇವಾ ಸಂಸ್ಥೆ ಮುಖ್ಯಸ್ಥರಾದ ಸಿಸ್ಟರ್ ಲಿನೆಟ, ಆರ್ಬಿಟ್ ಸಂಸ್ಥೆಯ ಮುಖ್ಯಸ್ಥರಾದ ಶಿವಕುಮಾರ್, ರೂಬಿನ್ ಹಾಗೂ ಮುಂತಾದರೂ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC