ಬೀದರ್ : 2025–26ನೇ ಶೈಕ್ಷಣಿಕ ವರ್ಷದ ಪ್ರೌಢ ಶಾಲಾ ವಿಭಾಗದಲ್ಲಿ ಔರಾದ್ ನ ನಾಲಂದಾ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಶೋಭಾ ತಂದೆ ಸಂತೋಷ್ ಎಂಬ ವಿದ್ಯಾರ್ಥಿನಿಯು ಬಾಲಕಿಯರ ಕುಸ್ತಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಅಪ್ರತಿಮ ಸಾಧನೆಗೈದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬೆಳಕುಣಿ (ಬಿಎಚ್) ಗ್ರಾಮದ ನಿವಾಸಿಯಾದ ಶೋಭಾ, ಜಿಲ್ಲಾ ಮಟ್ಟದ ಬಾಲಕಿಯರ ಕುಸ್ತಿ ಪಂದ್ಯದಲ್ಲಿ ತನ್ನ ಎದುರಾಳಿಯನ್ನು ಸೋಲಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಶಾಲೆಗೆ ಕೀರ್ತಿ ತಂದಿದ್ದಾಳೆಅವಳ ಈ ಸಾಧನೆಯನ್ನು ಶ್ಲಾಘಿಸಿ ಶಾಲೆಯ ಶಿಕ್ಷಕರು ಆಕೆಯನ್ನು ಸನ್ಮಾನ ಮಾಡಿದ್ದಾರೆ.
ವಿದ್ಯಾರ್ಥಿನಿ ಶೋಭಾ ಅವರನ್ನು ಎಸ್ ಪಿ ಕೆ ಸಂಸ್ಥೆಯ ಅಧ್ಯಕ್ಷ ಕೆ.ಪುಂಡಲೀಕ ರಾವ್, ಶಾಲೆಯ ಮುಖ್ಯಗುರು ಜಗನ್ನಾಥ್ ಬಿರಾದಾರ್, ದೈಹಿಕ ಶಿಕ್ಷಕ ಸುನೀಲಕುಮಾರ್ ವಾಗಮೋಡೆ, ಸಹ ಶಿಕ್ಷಕರಾದ ದಿಲೀಪಕುಮಾರ್ ಮೇತ್ರೆ, ಮಲ್ಲಿಕಾರ್ಜುನ್ ಕೋಟೆ, ಪರಮೇಶ್ವರ್ ಬಿರಾದಾರ್, ಸಿದ್ಧಾರ್ಥ ಕಾಂಬಳೆ, ಅಸ್ಪಾಕಮಿಯ್ಯಾ ಬೇಗ್ ಹಾಗೂ ಸಹ ಶಿಕ್ಷಕಿಯರಾದ ಪ್ರೀಯಾ ಬಿರಾದಾರ್, ಜ್ಯೋತಿ ಘೂಳೆ ಹಾಗೂ ಜ್ಞಾನೇಶ್ವರಿ, ಎಸ್ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC