ಕೊರಟಗೆರೆ : ಜಾತಿ ಗಣತಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗದ ಬಂಧುಗಳು ನಂ.೯ ಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಹಾಗೂ ಕೋಡ್ ನಂಬರ್‌ನಲ್ಲಿ ಎ–0795 ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕುಂಚಿಟಗರ ಸಂಘ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೆಪ್ಟೆಂಬರ್ 22 ರಿಂದ ಹಮ್ಮಿಕೊಂಡಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗದವರು ಯಾವುದೇ ಕುಲ ಪಂಗಡಗಳನ್ನು ಹೇಳದೆ ಕಾಲಂ ನಂಬರ್ 9 ರಲ್ಲಿ ಕುಚಂಟಿಗ ಎಂದೇ ಬರೆಸಬೇಕು, ಕಾಲಂ ನಂಬರ್ 8 ರಲ್ಲಿ ಧರ್ಮದಲ್ಲಿ ಹಿಂದೂ ಎಂದು ಹಾಗೂ ಕೋಡ್ ನಂಬರ್ ನಲ್ಲಿ ಎ–೦೭೯೫ ಎಂದು ನಮೂದಿಸುವುದು ಬಿಟ್ಟರೆ ಮತ್ತೇ ಯಾವುದೆ ಕುಲ ಮತ್ತು ಬೆಡಗುಗಳನ್ನ ಹೇಳಬೇಡಿ ಇದರಿಂದ ಕುಂಚಿಟಿಗರು ಕೇಂದ್ರದ ಹಿಂದುಳಿದ ಆಯೋಗದ ಪಟ್ಟಿಗೆ ಸೇರಲು ಅನುಕೂಲವಾಗುತ್ತದೆ, ಕುಂಚಿಟಿಗರು ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆಯಲ್ಲಿ ಇದ್ದಾರೆ, ಆದರೆ ಹಿಂದಿನ ಜಾತಿ ಗಣತಿ ಸಮೀಕ್ಷೆಯಲ್ಲಿ ಕುಂಚಿಟಿಗರ ಜನ ಸಂಖ್ಯೆಯನ್ನು ಕೇವಲ 1.92 ಲಕ್ಷ ಎಂದು ನಮೂದಿಸಲಾಗಿತ್ತು. ಆದರೆ ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 2.92 ಲಕ್ಷ ಕುಂಚಿಟಿಗ ಜನಾಂಗದ ಮತದಾರರೇ ಇದ್ದಾರೆ. ಆದ್ದರಿಂದ ಸರ್ಕಾರವು ಕುಂಚಿಟಿಗ ಜನಾಂಗವನ್ನು ಕುಲ ಜಾತಿಗಳ ಹೆಸರಿನಲ್ಲಿ ಒಡೆಯ ಬಾರದು, ಕುಂಚಿಟಿಗ ಸಮಾಜಕ್ಕೆ ಆಗಿರುವ ಅನ್ಯಾಯ ಮತ್ತು ನೋವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಈ ಜಾತಿ ಗಣತಿಯಲ್ಲಿ ಕುಂಚಿಟಿಗ ಜನಾಂಗದವರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕುಂಚಿಟಿಗ ಜನಾಂಗದ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಜಿ.ಆರ್.ಶಿವರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ 19 ಜಿಲ್ಲೆಯ 48 ತಾಲೂಕುಗಳಲ್ಲಿ ಕುಂಚಿಟಗ ಜನಾಂಗದವರು ವಾಸಮಾಡುತ್ತಿದ್ದಾರೆ, ಇದರಲ್ಲಿ ಹಲವು ತಾಲೂಕುಗಳಲ್ಲಿ ಬಹು ಸಂಖ್ಯಾತರಾಗಿದ್ದಾರೆ ಮೂಲ ವೃತ್ತಿಯಲ್ಲಿ ವ್ಯವಸಾಯ, ಕುರಿ, ಧನ ಸಾಕುವಿಕೆ ಯಂತೆ ಜೀವನ ಶೈಲಿಯಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಹೊಂದಿದ್ದಾರೆ, 48 ಬೆಡಗುಗಳನ್ನು ಹೊಂದಿರುವ ಕುಂಚಿಟಿಗ ಜನಾಂಗದವರು ರಾಜ್ಯದಲ್ಲಿ 35 ಲಕ್ಷ ಜನಾಂಗವಿದ್ದರು ಅವರನ್ನು ಹಿಂದುಳಿದ ವರ್ಗದಿಂದ ದೂರವಿಟ್ಟು ಅನ್ಯಾಯ ಮಾಡುತ್ತಿದ್ದಾರೆ, ಹಾಗೂ ಜನಾಂಗವನ್ನು ಬೆಡಗಿನ ಆಧಾರದಲ್ಲಿ ಒಡೆಯಬಾರದು ಆದ್ದರಿಂದ ಕುಂಚಿಟಿಗರು ಜಾತಿ ಸಮೀಕ್ಷೆ ಸಮಯದಲ್ಲಿ ಜನ ಗಣತಿಯ ಅಧಿಕಾರಿಗಳು ಮನೆಗೆ ಬಂದಾಗ ಕುಂಚಿಟಿಗರು ಎಂದು ಮಾತ್ರ ಹೇಳಿ ಕಾಲಂ ನಂಬರ್ 9 ರಲ್ಲಿ ನಮೂದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಸನ್ನಕುಮಾರ್, ಸಂಘದ ಉಪಾಧ್ಯಕ್ಷ ಕಾಮರಾಜು, ಕಾರ್ಯದರ್ಶಿ ಲಕ್ಷ್ಮಿಪ್ರಸಾದ್, ಎಸ್.ಕೆ.ನಾಗರಾಜು, ಸಾಕರಾಜು, ಎಸ್.ಎಲ್.ಎನ್.ಸ್ವಾಮಿ, ಹನುಮಂತರಾಯಪ್ಪ, ಕೆಂಪಣ್ಣ, ಮಹಿಳಾ ಅಧ್ಯಕ್ಷ ಲಲಿತಾ ಮಲ್ಲಪ್ಪ, ಶಾರದಮ್ಮ, ರಾಧಮಣಿ, ಸುಜಾತ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC