ಬೀದರ್: ಜಿಲ್ಲೆಯ ಚಿಂತಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕರಂಜಿ (ಬಿ) ಗ್ರಾಮದ ಹೊಲದಲ್ಲಿ ಗಾಂಜಾ ಬೆಳೆಯುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬೀದರ್ ಜಿಲ್ಲಾ ಪೊಲೀಸರು 8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಐಪಿಎಸ್ ಅವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮರಾವನ್ನು ಬಳಸಿರುವುದು ವಿಶೇಷವಾಗಿತ್ತು.
ಕಾರ್ಯಾಚರಣೆಯಲ್ಲಿ ಅಂಬೀಶ ವಾಗಮೋರೆ, ಪಿಎಸ್ ಐ ಡಿಸಿಆ ರ್‌ಬಿ ಘಟಕ ಬೀದರ್, ಡಿ.ಎಸ್.ಬಿ ಘಟಕ ಗುಂಡಪ್ಪಾ ರೆಡ್ಡಿ, ಎ.ಎಸ್.ಐ, ಸಿ.ಹೆಚ್.ಸಿ ಸಂತೋಷ, ಸಿ.ಪಿ.ಸಿ ಸಂತೋಷ ಮತ್ತು ಡ್ರೋನ್ ಕ್ಯಾಮರಾ ಆಪರೇಟರ್ ಸಿ.ಹೆಚ್.ಸಿ ರಾಜಕುಮಾರ ಜೊತೆಗೆ ಚಿಂತಾಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಶೇಖರ ನಿರ್ಣೆ ಅವರ ಸಿಬ್ಬಂದಿಯಾದ ಸಿದ್ದೇಶ್ವರ, ಶ್ರೀಪತಿ, ಗೋರಖ, ಸದೋಜಾತ, ಸಂತೋಷ, ಮಾಣಿಕ ಭಾಗಿಯಾಗಿದ್ದರು.
ಹೊಲದಲ್ಲಿ ಪತ್ತೆಯಾದ ಗಾಂಜಾದ ತೂಕ 8 ಕೆ.ಜಿ 120 ಗ್ರಾಂ ನಷ್ಟಿದ್ದು 8,12,000 ರೂ. ಮೌಲ್ಯ ಬೆಲೆ ಬಾಳುವ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿತನನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


