ಸರಗೂರು: ವಿಶ್ವಕರ್ಮ ಸಮಾಜವು ಸಂಘಟಿತರಾಗಿ ಒಗ್ಗೂಡಿದಾಗ ಮಾತ್ರ ಸರಕಾರದ ವಿವಿಧ ಯೋಜನೆಗಳ ಸದ್ಬಳಕೆಗೆ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ಸಲಹೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿಶ್ವಕರ್ಮ ಸಮಾಜದಿಂದ ಬುಧವಾರ ನಡೆದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಎಂಜಿನಿಯರ್ ಗಳಂತೆ ಕೆಲಸ ಮಾಡುತ್ತಾ ಬಂದಿದ್ದಾರೆ. ಸಮುದಾಯದವರಿಗೆ ಕಲೆ ರಕ್ತಗತವಾಗಿ ಬಂದಿದೆ. ಇಂಥ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆ ಸೌಲಭ್ಯಗಳನ್ನು ರೂಪಿಸಿದೆ. ಅದರ ಬಗ್ಗೆ ಸಮುದಾಯದವರಲ್ಲಿ ಮಾಹಿತಿಯ ಕೊರತೆಯಿದೆ. ಹೀಗಾಗಿ ಎಲ್ಲರೂ ಸಂಘಟಿತರಾಗಬೇಕು. ಅಧಿಕಾರಿಗಳೂ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸರಗೂರು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಟರಾಜು ಮಾತನಾಡಿ, ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮುದಾಯ ಇಲ್ಲದೆ ಸಮಾಜ ಕಟ್ಟಲು ಸಾಧ್ಯವಿಲ್ಲ. ವಿಗ್ರಹಗಳ ಕೆತ್ತನೆ, ಮರಗೆಲಸ, ವ್ಯವಸಾಯಕ್ಕೆ ಅಗತ್ಯ ನೇಗಿಲು, ಮದುವೆ ಸಂದರ್ಭದಲ್ಲಿ ಅಗತ್ಯ ಮಾಂಗಲ್ಯ. ಹೀಗೆ ಹತ್ತು-ಹಲವು ಸಮಾಜ ಸೇವಾಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಗೌರವಾದ್ಯಕ್ಷ ಜಿ.ರವಿಕುಮಾರ್ ಮಾತನಾಡಿ, ವಿಶ್ವಕರ್ಮರು ವಿಶ್ವದಲ್ಲಿಯೇ ಖ್ಯಾತಿ ಗಳಿಸಿದ್ದಾರೆ. ಇವರಿಲ್ಲದೆ ದೇವಾಲಯ, ಮನೆಗಳಿಲ್ಲ. ಹೀಗಾಗಿ ದೇವತೆಗಳ ಎಂಜಿನಿಯರ್‌ಗಳಾದ ವಿಶ್ವಕರ್ಮರು ಶ್ರೇಷ್ಠರು ಎಂದರು.
ಜೆಎಸ್ ಎಸ್ ಶಾಲಾ ಶಿಕ್ಷಕ ಸಿದ್ದಲಿಂಗಸ್ವಾಮಿ ಉಪನ್ಯಾಸ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಶಿವಕುಮಾರ್, ಸ್ವಾಮಿ, ನವೀನ್, ಕಸಾಪ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಸಂತೋಷ್, ಕಾರ್ಯದರ್ಶಿ ಮಂಜುನಾಥ್, ಕಾಳಸ್ವಾಮಿ, ಎಸ್.ವಿ.ಕೃಷ್ಣಾಚಾರ್, ಸುರೇಶ್, ಶಶಿ, ಗೋಪಾಲಕೃಷ್ಣ, ಶಂಭುಲಿಂಗನಾಯಕ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಂಭವಮೂರ್ತಿ, ಯುವಬ್ರಿಗೇಡ್ ಅಧ್ಯಕ್ಷ ಬಿ.ಡಿ.ದಾಸಚಾರಿ, ಜಿ.ಕಾಳಸ್ವಾಮಿ, ಸೋಮಣ್ಣ, ಲೋಕೇಶ್, ಬಾಡಗ ರವಿ, ನಿಂಗಾಚಾರ್, ಮಂಜುನಾಥ್, ರಾಜು, ನಾಗರಾಜಚಾರ್, ದಡದಹಳ್ಳಿ ಪಾಪಣ್ಣ, ಪ್ರಕಾಶ್, ಪುಟ್ಟು, ನಾಗಸುಂದರ್, ವಿನಯ್, ನರಸಿಂಹಸ್ವಾಮಿ, ಮಹೇಶ್, ವೇಣು, ಎಎಸ್ ಐ ಶ್ರೀಕಂಠಸ್ವಾಮಿ, ಸೇರಿದಂತೆ ಇಲಾಖಾಧಿಕಾರಿಗಳು ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC