ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ರೋಬೋ ಶಂಕರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಶೂಟಿಂಗ್ ವೊಂದರ ವೇಳೆಯೇ ಈ ಘಟನೆ ನಡೆದಿದೆ.
46 ವರ್ಷ ವಯಸ್ಸಿನ ರೋಬೋ ಶಂಕರ್ ಅವರು ಕುಸಿದು ಬಿದ್ದು ನಿತ್ರಾಣಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಈ ಹಿಂದೆ ರೋಬೋ ಶಂಕರ್ ಅವರು ಜಾಂಡೀಸ್‌ನಿಂದ ಬಳಲಿದ್ದರು. ಆನಂತರ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.
ಆದರೆ ಈಗ ಮತ್ತೆ ಚೇತರಿಸಿಕೊಂಡಿದ್ದ ಅವರು ಎಂದಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ರೋಬೋ ಶಂಕರ್ ಅವರ ನಿಧನಕ್ಕೆ ಕಾಲಿವುಡ್ ನ ಖ್ಯಾತ ಕಲಾವಿದರಾದ ಕಮಲಹಾಸನ್, ರಜನಿಕಾಂತ್, ವಿಜಯ್, ಅಜಿತ್, ಕಾರ್ತಿ, ಸಿಂಬು ಖುಷ್ಬೂ, ಸಿಮ್ರಾನ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC