ಬೀದರ್: ಜಿಲ್ಲೆಯ ಸಂತಪೂರ ನಾಡ ಕಚೇರಿಯಲ್ಲಿ ಕಳೆದ 6 ತಿಂಗಳುಗಳಿಂದ ಆಧಾರ್ ಆಪರೇಟರ್ ಇಲ್ಲದೇ ಇಲ್ಲಿನ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ತಕ್ಷಣವೇ ಆಧಾರ್ ಆಪರೇಟರ್ ನ್ನು ನೇಮಕ ಮಾಡುವಂತೆ ದಲಿತ ಸಂಘಟನೆ ಮುಖಂಡರು ಔರಾದ್ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ತುಕಾರಾಮ ಹಸನ್ಮುಖಿ ಈ ಸಂಬಂಧ ನೀಡಿರುವ ಮನವಿಯಲ್ಲಿ, ಸಂತಪೂರ ಹೋಬಳಿಯ ಸಂತಪೂರ ನಾಡ ಕಚೇರಿಗೆ ಸುಮಾರು 30 ಕ್ಕಿಂತಲು ಹೆಚ್ಚಿನ ಹಳ್ಳಿಯ ಜನರು ದಿನಾಲೂ ಆಧಾರ್ ಸಂಬಂಧಿಸಿದ ಕೆಲಸಗಳಿಗಾಗಿ ಅಲೆದಾಡುತ್ತಿದ್ದಾರೆ. ಆದರೆ 6 ತಿಂಗಳುಗಳಿಂದ ಸಂತಪೂರ ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್ ಆಪರೇಟರ್ ಇರುವುದಿಲ್ಲ. ಮತ್ತು ಸಂತಪೂರ ಹೋಬಳಿಯ ಜನರು ಬೇರೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದಾಗ, ಅಲ್ಲಿನ ಆಧಾರ್ ಕೇಂದ್ರದ ಆಪರೇಟರ್ ಸಂತಪೂರ ಹೋಬಳಿಯವರ ಕೆಲಸ ಮಾಡಿಕೊಡುತ್ತಿಲ್ಲ, ಹೀಗಾಗಿ ಕೂಡಲೇ ಸಂತಪೂರ ನಾಡ ಕಚೇರಿಗೆ ಶಾಶ್ವತ ಆಧಾರ್ ಕಾರ್ಡ್ ಆಪರೇಟರ್ ನೇಮಕ ಮಾಡುವಂತೆ ವಿನಂತಿಸಲಾಗಿದೆ.
ಗಣಪತಿ, ಶೆಂಬೆಳ್ಳಿ ದಲಿತ ದಲಿತ ಹಿರಿಯ ಮುಖಂಡರು, ಮಲ್ಲಿಕಾರ್ಜುನ ಜೊನ್ನಿಕೆರಿ ಸಂಘಟನಾ ಸಂಚಾಲಕರು, ತುಕಾರಾಮ ಹಸನ್ಮುಖಿ. ಭೀಮವಾದ ದಲಿತ ಸಂಘರ್ಷ ಸಮಿತಿ, ಬಸವರಾಜ. ಲಾಧಾ ಸಾಮಾಜಿಕ ಹೋರಾಟಗಾರರು, ಪ್ರಕಾಶ ಕಾಂಬಳೆ ಸಾಮಾಜಿಕ ಹೋರಾಟಗಾರರು, ಪ್ರವೀಣ್ ಡೋಡೆ, ಶಾಂತಕುಮಾರ್ ಸಾಮಾಜಿಕ ಹೋರಾಟಗಾರರು, ಸಿದ್ದಣ್ಣ ನಾಗೂರ್ (B) ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC