ಕೊರಟಗೆರೆ: ತಾಲೂಕು ಬಂಜಾರ ಸಂಘದ ವತಿಯಿಂದ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಬಂಜಾರ ಜಾಗೃತಿ ದಳ ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಪ್ಪಸರ್ ನಾಯ್ಕ್ ಮಾತನಾಡಿ, ಬಂಜಾರ ಸಮುದಾಯವು ಬುಡಕಟ್ಟು ಜನಾಂಗವಾಗಿದ್ದು, ಬೆಟ್ಟ ಗುಡ್ಡಗಳ ಅಕ್ಕ ಪಕ್ಕ ತಾಂಡಗಳನ್ನು ನಾವು ಕಾಣಬಹುದು ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ವಿಚಾರಗಳನ್ನು ತಿಳಿದು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿಯಾಗಬೇಕಿದೆ. ತಾಲೂಕು ಮಟ್ಟದಲ್ಲಿ ಒಂದು ಸಮುದಾಯ ಭವನ ಇಲ್ಲದೆ ಇರುವುದು ನಮಗೆ ಬೇಸರದ ಸಂಗತಿ, ಶಾಸಕರು ಹಾಗೂ ಸಚಿವರು ಆದಂತಹ ಡಾಕ್ಟರ್ ಜಿ.ಪರಮೇಶ್ವರ್ ರವರು ನಮ್ಮ ಸಮುದಾಯವನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ಒಂದು ಸಮುದಾಯ ಭವನವನ್ನು ಮಂಜೂರು ಮಾಡಿಸಿಕೊಡಬೇಕು, ಹಳ್ಳಿ ಹಳ್ಳಿಗಳಲ್ಲಿ ಇದೇ ರೀತಿ ಸಂಘಟನೆ ಮಾಡಿದರೆ ಸರ್ಕಾರಕ್ಕೆ ನಮ್ಮ ಬಲಪ್ರದರ್ಶನ ಮಾಡಬಹುದು ಎಂದರು.
ನಂತರ ತಾಲೂಕು ಅಧ್ಯಕ್ಷ ಲಕ್ಷ್ಮಣ್ ನಾಯಕ್ ಮಾತನಾಡಿ, ತಾಲೂಕಿನಲ್ಲಿ 24 ತಾಂಡಗಳಿದ್ದು ತಾಂಡಗಳ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ, ಎಲ್ಲಾ ತಾಂಡಗಳಿಗೂ ಸಮುದಾಯ ಭವನವನ್ನು ನಿರ್ಮಿಸಲು ಶ್ರಮಿಸಿ ಎಂದು ಕರೆ ನೀಡಿದ ಅವರು, ನಮ್ಮ ಶಾಸಕರಾದ ಡಾ.ಜಿ.ಪರಮೇಶ್ವರ್ ರವರಿಗೆ ಈಗಾಗಲೇ ತಾಲೂಕು ಮಟ್ಟದಲ್ಲಿ ಸಮುದಾಯ ಭವನ ಕಟ್ಟುವ ವಿಚಾರ ಗಮನಕ್ಕೆ ತಂದಿದ್ದು, ಅವರು ಕೂಡ ನಮಗೆ ಸ್ಪಂದಿಸಿ ತಹಶೀಲ್ದಾರ್ ರವರಿಗೆ ಭವನ ನಿರ್ಮಿಸಲು ಸ್ಥಳ ಗುರುತಿಸುವಂತೆ ಸೂಚಿಸಿದ್ದು ಅದರಂತೆ ತಹಶೀಲ್ದಾರ್ ರವರು ಕೂಡ ಈಗಾಗಲೇ ಎರಡು ಸ್ಥಳವನ್ನು ಗುರುತಿಸಿದ್ದಾರೆ, ಮುಂದಿನ ದಿನಗಳಲ್ಲಿ ಭವನವನ್ನು ಕಟ್ಟುವಂತಹ ಕೆಲಸವನ್ನು ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡಬೇಕಿದೆ ಎಂದು ತಿಳಿಸಿದರು.
ಸಬ್ ಇನ್ಸ್ ಪೆಕ್ಟರ್ ತೀರ್ಥೇಶ್ ಉಪತಹಶೀಲ್ದಾರ್ ರಾಮ್ ಪ್ರಸಾದ್, ಎಡಿಎ ಗುರುಮೂರ್ತಿ ಇಂದಿರಾ ದೇನಾನಾಯ್ಕ, ವಿ ಎನ್ ಮೂರ್ತಿ ಹರೀಶ್ ನಾಯಕ್, ಮೂರ್ತಿ ನಾಯಕ್, ಮೀಸೆ ಲಕ್ಷ್ಮಾನಾಯ್ಕ್, ಕೃಷ್ಣ ನಾಯಕ್, ಲಕ್ಷ್ಮನಾಯ್, ಕೃಷ್ಣ ನಾಯಕ್, ವಿಜಯಶಂಕರ್ ಶಬರೀಶ್ ರಾಮಸ್ವಾಮಿ ಚಂದು ನಾಯಕ ಸಿದ್ದೇಶ್ ಸುಮಿತ್ರ ಮಂಜುಳಾಬಾಯಿ. ಲಂಕೆನಹಳ್ಳಿ ಲಕ್ಷ್ಮನಾಯ್ಕ್ ವಡ್ಡಗೆರೆ ಕೃಷ್ಣ ನಾಯಕ್ ಸೇರಿದಂತೆ ಸಮಾಜದ ಮುಖಂಡರು ನಾಯಕ್ದಾವೋ ಕಾರ್ವರಿ ಸೇರಿದಂತೆ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC