ಬೀದರ್: ಜಿಲ್ಲೆಯ ಔರಾದ ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದಲ್ಲಿ ಜೆಜೆಎಂ ಯೋಜನೆಯ ಅಡಿಯಲ್ಲಿ ಹೊಸ ಬೋರ್ವೆಲ್ ಹಾಕದೆ ಹಳೆಯ ಬೋರ್ವೆಲ್ ಪೈಪ್ ಲೈನ್ ನ ನೀರು ಸರಬರಾಜು ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮದ ಮುಖಂಡರಾದ ಪ್ರಜಯ್ ಪಾಟೀಲ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದಲ್ಲಿ ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿರುವುದಿಲ್ಲ. ಹೊಸ ಬೋರ್ವೆಲ್ ತೋಡಲಾರದೆ ಗ್ರಾಮದ ಹಳೆಯ ಬೋರ್ವೆಲ್ ಗಳಿಗೆ ಪೈಪಲೈನ್ ಅಳವಡಿಸಿ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗ್ರಾಮದ ಜನರಿಗೆ ಗೊತ್ತಿಲ್ಲದೆ ಸಂಪೂರ್ಣ ಕಾಮಗಾರಿ ಮುಗಿದಿದೆ ಅಂತ ಪಂಚಾಯತ ಪಿ.ಡಿ.ಓ. ಅಧಿಕಾರಿಗೆ ಒಪ್ಪಿಸಿರುತ್ತಾರೆ. ಮೇಲಾಧಿಕಾರಿಗಳು ಗ್ರಾಮದಲ್ಲಿ ಹೊಸ ಬೋರ್ವೆಲ್ ಅಳವಡಿಸಿ ಹಳೆ ಬೋರ್ವೆಲ್ ಕನೆಕ್ಷನ್ ಕೊಟ್ಟಿರುವುದನ್ನು ರದ್ದು ಮಾಡಿ ಹೊಸ ಬೋರ್ವೆಲ್ ಗಳಿಗೆ ಕನೆಕ್ಷನ್ ಮಾಡಿಕೊಡಬೇಕು ಮತ್ತು ಮಹಾದೇವ ಮಂದಿರದ ಕಾಂಪೌಂಡ್ ವಾಲ್ ಕಟ್ಟಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC