ತುಮಕೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ದರ ಪರಿಷ್ಕರಣೆ ಮೂಲಕ ಬಡವರು, ಮಧ್ಯಮ ವರ್ಗದ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಜಿಎಸ್ ಟಿ 2.0 ವಿಜಯೋತ್ಸವದಲ್ಲಿ ಮಾತನಾಡಿದರು. ಭಾರತದ ಬೆಳವಣಿಗೆಯ ವೇಗ ನಿಯಂತ್ರಿಸಲು ಅಮೆರಿಕದಂತಹ ದೇಶಗಳು ಹೊಂಚು ಹಾಕುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ತೆರಿಗೆ ಸುಧಾರಣೆ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸ್ವದೇಶಿ ವಸ್ತು ಉತ್ಪಾದನೆ ಮತ್ತು ಬಳಕೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಕೆ.ಧನುಷ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಎಸ್.ಪಿ.ಚಿದಾನಂದ್, ಬ್ಯಾಟರಂಗೇಗೌಡ, ವಿರುಪಾಕ್ಷಪ್ಪ, ರವೀಶಯ್ಯ, ಬಾಲಾಜಿ, ಮಧು, ಕುಮಾರ್, ಶಿವರಾಜು, ಗಂಗೇಶ್, ಅಖಿಲ್, ವೆಂಕಟೇಶ್, ವರ್ತಕರಾದ ಗಿರೀಶ್, ದರ್ಶನ್, ಪ್ರಸನ್ನ, ಪ್ರಶಾಂತ್, ನಂದಕಿಶೋರ್ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC