ಕೊರಟಗೆರೆ: ಕೊರಟಗೆರೆ ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರು ಮತ್ತು ಆಡಳಿತ ಮಂಡಳಿ ನಡುವೆ ಉತ್ತಮ ಸಹಕಾರವಿದ್ದು, ಸಾರ್ವಜನಿಕರು ಠೇವಣಿಗಳನ್ನು ಸಹಕಾರ ಸಂಘದಲ್ಲಿ ಇಟ್ಟರೆ ಅದು ರೈತರಿಗೆ ಉಪಯೋಗವಾಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ವಿನಯ್‌ಕುಮಾರ್ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಕಸಬಾ ಪ್ರಾಥಮಿಕ ಸಹಾಕಾರ ಸಂಘ ಏರ್ಪಡಿಸಿದ್ದ ೨೦೨೪–೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕಸಬಾ ವಿ.ಎಸ್.ಎಸ್.ಎನ್. ಸಂಘವು ಬಹಳ ಸಂಕಷ್ಠದಲ್ಲಿದ್ದು ನಂತರ ಚೇತರಿಕೆ ಕಂಡಿದೆ, ತಾಲೂಕಿನಲ್ಲೇ ಹೆಚ್ಚಿನ ಸದಸ್ಯರನ್ನು ಹಾಗೂ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಡೆದಿದೆ, ಈ ಹಿಂದೆ ಸಂಘದಲ್ಲಿ ಜಿಡಿಪಿ ಸಾಲಗಳನ್ನು ನೀಡಿದ್ದು ಅವುಗಳನ್ನು ವಸೂಲಿ ಮಾಡುವುದು ಪ್ರಸ್ತುತವಿರುವ ಆಡಳಿತ ಮಂಡಳಿಗೆ ತಲೆ ನೋವಾಗಿದೆ, ಆದರೂ ಎಲ್ಲರೂ ಒಟ್ಟಾಗಿ ಸಾಲ ಮರುಪಾವತಿಗೆ ಶ್ರವಹಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಕೆಸಿಸಿ ಸಾಲದಲ್ಲಿ ರೈತರು ಮರಣ ಹೊಂದಿದ್ದಾಗ ಅದನ್ನು ಮತ್ತೆ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಿ ಆ ಕುಟುಂಬಕ್ಕೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ಈಗಾಗಲೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ನವರು ನೂತನವಾಗಿ ಹೊಸ ರೈತರಿಗೆ ಕೆಸಿಸಿ ಸಾಲ ಕೊಡುವುದಾಗಿ ಭರವಸೆ ನೀಡಿದ್ದಾರೆ, ನಮ್ಮ ಸಹಕಾರ ಸಂಘವು ರೈತರ ಮತ್ತು ಆಡಳಿತ ಮಂಡಳಿಯ ನಡುವೆ ಉತ್ತಮವಾದ ಅನುಬಂಧ ಹೋಂದಿದೆ ಎಂದರು.
ಡಿಸಿಸಿ ಬ್ಯಾಂಕ್ ನ ನೂತನ ನಿರ್ದೇಶಕ ಎಸ್.ಹನುಮಾನ್ ಮಾತನಾಡಿ, ಬರುವ ದಿನಗಳಲ್ಲಿ ರೈತರಿಗೆ ಕೆಸಿಸಿ ಸಾಲವನ್ನು ಎಲ್ಲಾ ಸಹಕಾರ ಸಂಘಗಳಿಗೆ ನೀಡುವ ಭರವಸೆಯನ್ನು ನೂತನ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ನವರು ತಿಳಿಸಿದ್ದಾರೆ, ಈಗಾಗಲೆ ಕಸಬಾ ಸಹಕಾರ ಸಂಘಕ್ಕೆ ೪.೬೦ ಕೋಟಿ ರೂಗಳು ಕೆಸಿಸಿ ಸಾಲವನ್ನು ನೀಡಲಾಗಿದೆ, ಸಂಘವು ೪೯,೭೦ ಲಕ್ಷಗಳ ಸ್ವಂತ ಬಂಡವಾಳ ಸಾಲವನ್ನು ನೀಡಿದೆ, ಕಸಬಾ ವಿಎಸ್ ಎಸ್ ಎನ್ ತಾಲೂಕಿನಲ್ಲಿ ಅತಿ ಹೆಚ್ಚು ಶೇರುದಾರರನ್ನು ಹೊಂದಿರುವ ಸಹಕಾರ ಸಂಘವಾಗಿದ್ದು ಹಲವು ಸಮಸ್ಯೆಗಳ ನಡುವುಯೂ ಆಡೆಳಿತ ಮಂಡಳಿ ಉತ್ತಮವಾದ ಕೆಲಸ ಮಾಡುತ್ತಿದೆ ಎಂದರು.
ಮೇಲ್ವಿಚಾರಕ ತಿಮ್ಮರಾಜು ಮಾತನಾಡಿ, ಈ ಹಿಂದೆ ಕಸಬಾ ವಿಎಸ್ ಎಸ್ ಎನ್ ಸಂಘವು ಮುಚ್ಚಲಾಗಿತ್ತು. ನಂತರ ಇದನ್ನು ಮತ್ತೆ ಮುಂಚುಣಿಗೆ ತರಲಾಯಿತು, ಸಹಕಾರ ಸಂಘದಲ್ಲಿ ಕಾರ್ಯದರ್ಶಿಯ ಪಾತ್ರ ಮಹತ್ವವಾದುದು ಕಾರ್ಯದರ್ಶಿಗಳು ಸಂಘದ ಕೆಲಸವನ್ನು ಪಾರದರ್ಶಕತೆ ಮತ್ತು ನಿಷ್ಠೆಯಿಂದ ಮಾಡಬೇಕು ಹಾಗೂ ಆಡಳಿತ ಮಂಡಳಿ ಅವರಿಗೆ ಸಹಕಾರ ನೀಡಬೇಕು, ಆಗ ರೈತರು ಆ ಸಂಘದ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತಾರೆ ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷೆ ಸುಂದರಮ್ಮ, ನಿದೇರ್ಶಕರುಗಳಾದ ಹೆಚ್.ಸಿ.ರಾಜಣ್ಣ, ಕೃಷ್ಣಮೂರ್ತಿ, ಪುಟ್ಟನರಸಯ್ಯ, ಜಿ.ಸಿ.ರಮೇಶ್, ಕೆ.ವಿ.ಪುರುಷೋತ್ತಮ್, ಡಿ.ಪಿ.ಸುರೇಶ್, ಡಿ.ಎಲ್.ಮಲ್ಲಯ್ಯ, ತಿಮ್ಮಪ್ಪ, ಎನ್.ನೇತ್ರಾವತಿ, ಜಿ.ಎನ್.ದಿವಾಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಓ.ಕೃಷ್ಣಮೂರ್ತಿ, ನೌಕರರಾದ ದಿನಕರ, ಮಾರುತಿ ಸೇರಿದಂತೆ ಇನ್ನಿತರರು ಹಾಜರಿದ್ದರು. ಸುಮಾರು ೪೮೦ ಕ್ಕೂ ಹೆಚ್ಚು ಷೇರುದಾರರು ಮಹಾಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC