ಸರಗೂರು: ಬೈಕ್ ನಲ್ಲಿ ಆರೋಪಿಯೊಬ್ಬ ಸಾಗಣೆ ಮಾಡುತ್ತಿದ್ದ ಹಸಿ ಹಾಗೂ ಒಣಗಾಂಜಾವನ್ನು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸರಗೂರು ತಾಲೂಕಿನ ನಂಜನಾಥಪುರ ಗ್ರಾಮದ ನಿವಾಸಿ ವೆಂಕಟೇಶ್ ಎಂಬಾತ ಕಂದೇಗಾಲ ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಬೈಕ್ ನಲ್ಲಿ ಪೇಪರ್ ನಲ್ಲಿ ಸುತ್ತಿಕೊಂಡು ಗಾಂಜಾ ಸಾಗಿಸುತ್ತಿದ್ದನು. ಮೈಸೂರು ಗ್ರಾಮಾಂತರ ಉಪ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಆರೋಪಿ ವೆಂಕಟೇಶ್ ಬೈಕ್ ಹಾಗೂ ಮಾಲನ್ನು ಬಿಟ್ಟು ಪರಾರಿಯಾಗಿದ್ದಾನೆ.
ಈ ವೇಳೆ 15 ಸಾವಿರ ರೂ. ಮೌಲ್ಯದ ಹೂ ಬೀಜ ಮತ್ತು ತೆನೆ ಮಿಶ್ರಿತ 500ಗ್ರಾಂ ಒಣಗಾಂಜಾ ಹಾಗೂ 1.45 ಲಕ್ಷ ರೂ. ಮೌಲ್ಯದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಎನ್ ಡಿಪಿಎಸ್ ಅನ್ವಯ ಪ್ರಕರಣ ದಾಖಲಿಸಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ನಂಜನಗೂಡು ಉಪ ವಿಭಾಗದ ಅಬಕಾರಿ ಇನ್ ಸ್ಪೆಕ್ಟರ್ ಮುದಾಸರ್ ಬಾಷಾ, ಮುಖ್ಯಪೇದೆ ಕೆ.ವಿ.ಮಹೇಶ್, ಸಾಗರೆ ಗ್ರಾಪಂ ಪಿಡಿಒ ಲೋಕೇಶ್, ವಾಹನ ಚಾಲಕಿ ಎಂ.ಎಚ್.ಭಾರತಿ ಹಾಜರಿದ್ದರು
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC